ಪಾಕ್‌ ಜೊತೆ ಯುದ್ಧ ಶುರುವಾದ್ರೆ ನಮ್ಮ ಕಥೆ ಏನು? ಬಂಕರ್‌ಗಳ ತುರ್ತು ದುರಸ್ತಿಗೆ ಗಡಿ ಭಾಗದ ಜನರ ಒತ್ತಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಯುದ್ಧದ ಕಾರ್ಮೋಡ ಆವರಿಸಿರುವ ಕಾರಣ ಗಡಿಯಾಚೆಗಿನ ಶೆಲ್ ದಾಳಿಯ ಸಮಯದಲ್ಲಿ ತಮ್ಮನ್ನು ರಕ್ಷಿಸಿಕೊಳ್ಳಲು ತುರ್ತಾಗಿ ಗಡಿ ಬಂಕರ್ ಗಳನ್ನು ದುರಸ್ತಿಗೊಳಿಸಬೇಕು ಎಂದು ಗಡಿ ಪ್ರದೇಶದ ಜನರು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

ಅಪೂರ್ಣಗೊಂಡಿರುವ ಬಂಕರ್ ಗಳ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಬೇಕು, ಮಕ್ಕಳು ಮರಿಯನ್ನು ಕಟ್ಟಿಕೊಂಡು ನಾವು ಎಲ್ಲಿಗೆ ಹೋಗೋದು? ಎಂದು ಜನ ಆತಂಕದಲ್ಲಿ ಪ್ರಶ್ನಿಸಿದ್ದಾರೆ.

ಇತ್ತೀಚಿಗೆ ಪಹಲ್ಗಾಮ್ ನಲ್ಲಿ ನಡೆದ 26 ಜನರ ಬಲಿ 2021 ರ ಕದನ ವಿರಾಮ ಒಪ್ಪಂದವನ್ನು ದುರ್ಬಲಗೊಳಿಸಿದ್ದು, ಶಾಂತಿಯನ್ನು ಛಿದ್ರಗೊಳಿಸಿದೆ. ಗಡಿಭಾಗದ ಗ್ರಾಮಗಳಲ್ಲಿ ಆತಂಕ ಹೆಚ್ಚುತ್ತಿರುವಂತೆಯೇ, ಬಂಕರ್‌ಗಳ ಹದಗೆಡುತ್ತಿರುವ ಸ್ಥಿತಿಯ ಬಗ್ಗೆ ಜನರು ಭಯಭೀತಿಗೊಂಡಿದ್ದಾರೆ.

ಪಾಕಿಸ್ತಾನಿ ಪೋಸ್ಟ್‌ಗಳಿಂದ ಕೇವಲ 500 ಮೀಟರ್‌ಗಳಷ್ಟು ದೂರದಲ್ಲಿರುವ ಚಂದ್ ಚೌಕ್ ನಂತಹ ಹಳ್ಳಿಗಳಲ್ಲಿ ಈ ಬಂಕರ್ ಗಳಿವೆ. ಈ ಹಿಂದೆ 2020, 2018 ಮತ್ತು 2014 ರಲ್ಲಿ ಶೆಲ್ ದಾಳಿಯನ್ನು ಎದುರಿಸಿದ ಈ ಹಳ್ಳಿಗಳು ಬೆರಳೆಣಿಕೆಯಷ್ಟು ಬಂಕರ್‌ಗಳನ್ನು ಹೊಂದಿವೆ. ಅವುಗಳಲ್ಲಿ ಹಲವು ಅಪೂರ್ಣ ಅಥವಾ ಬಳಸಲಾಗದವು. ಬಹುತೇಕ ಬಂಕರ್‌ಗಳು ಪಾಳುಬಿದ್ದಿವೆ. ವಿದ್ಯುತ್ ಇಲ್ಲ, ನೀರು ಇಲ್ಲ, ಶೌಚಾಲಯಗಳಿಲ್ಲ. ಕೆಲವಕ್ಕೆ ಛಾವಣಿಯೂ ಇಲ್ಲ. ಎರಡು ವರ್ಷಗಳ ಹಿಂದೆ ಅಪೂರ್ಣಗೊಂಡಿದ್ದು, ಕಾಮಗಾರಿ ಏಕೆ ಸ್ಥಗಿತಗೊಂಡಿತು ಎಂಬುದು ತಿಳಿಯುತ್ತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!