ವಾಷಿಂಗ್ಟನ್ ಸುಂದರ್ ಮಾರಕ ಬೌಲಿಂಗ್: ನ್ಯೂಜಿಲೆಂಡ್ 259 ರನ್‌ ಗೆ ಆಲೌಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾಗೆ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿರುವ ಆಫ್‌ಸ್ಪಿನ್ನರ್ ವಾಷಿಂಗ್ಟನ್ ಸುಂದರ್ 7 ವಿಕೆಟ್ ಕಬಳಿಸುವ ಮೂಲಕ ಕಿವೀಸ್ ತಂಡಕ್ಕೆ ಮಾರಕವಾಗಿ ಪರಿಣಮಿಸಿದ್ದಾರೆ.

ಟಾಸ್ ಗೆದ್ದು ಬ್ಯಾಟಿಂಗ್ ಅಯ್ದುಕೊಂಡ ನ್ಯೂಜಿಲೆಂಡ್ ತಂಡವು ಮೊದಲ ಇನ್ನಿಂಗ್ಸ್‌ನಲ್ಲಿ 259 ರನ್‌ಗಳಿಗೆ ಸರ್ವಪತನ ಕಂಡಿದೆ.

ಪುಣೆ ಎಂಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಆರಂಭದಲ್ಲೇ ಭಾರತ ತಂಡವು ಟಾಮ್ ಲೇಥಮ್ ಬಲಿ ಪಡೆಯುವಲ್ಲಿ ಯಶಸ್ವಿಯಾಯಿತು. ಲೇಥಮ್ 15 ರನ್ ಗಳಿಸಿ ಅಶ್ವಿನ್ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಇನ್ನು ವಿಲ್ ಯಂಗ್ ಕೂಡಾ 18 ರನ್ ಗಳಿಸಿ ಅಶ್ವಿನ್‌ಗೆ ಎರಡನೆ ಬಲಿಯಾದರು.

ಇನ್ನು ಕಿವೀಸ್ ಪರ ಡೆವೊನ್ ಕಾನ್ವೇ ಆಕರ್ಷಕ 76 ರನ್ ಸಿಡಿಸುವ ಮೂಲಕ ಟೀಂ ಇಂಡಿಯಾ ಬೌಲರ್‌ಗಳನ್ನು ಮತ್ತೊಮ್ಮೆ ಕಾಡಿದರು. ಆದರೆ ಈ ಸಂದರ್ಭದಲ್ಲಿ ಮತ್ತೆ ದಾಳಿಗಿಳಿದ ಅಶ್ವಿನ್‌, ಕಾನ್‌ವೇಯನ್ನು ಬಲಿ ಪಡೆಯುವಲ್ಲಿ ಯಶಸ್ವಿಯಾದರು.

ದೇಶಿ ಕ್ರಿಕೆಟ್‌ನಲ್ಲಿ ಅದ್ಭುತ ಅಲ್ರೌಂಡ್ ಪ್ರದರ್ಶನದ ಮೂಲಕ ಮಿಂಚಿ ಆಯ್ಕೆಗಾರರ ಗಮನ ಸೆಳೆದಿದ್ದ ವಾಷಿಂಗ್ಟನ್ ಸುಂದರ್, ಇದೀಗ ಕಮ್‌ಬ್ಯಾಕ್ ಪಂದ್ಯದಲ್ಲೇ 7 ವಿಕೆಟ್ ಕಬಳಿಸುವ ಮೂಲಕ ಮಿಂಚಿದ್ದಾರೆ. ಕಿವೀಸ್ ಪರ ಮಧ್ಯಮ ಕ್ರಮಾಂಕದಲ್ಲಿ ದಿಟ್ಟ ಹೋರಾಟ ನಡೆಸಿದ ರಚಿನ್ ರವೀಂದ್ರ(65) ಸೇರಿದಂತೆ 7 ಆಟಗಾರರನ್ನು ಬಲಿ ಪಡೆಯುವ ಮೂಲಕ ಸುಂದರ್, ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!