ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ಅಂತ್ಯಗೊಳಿಸಲು ಶಾಂತಿ ಪ್ರಯತ್ನ ಮಾಡುವುದಾದರೆ ಅದಕ್ಕೆ ಸಹಕರಿಸಲು ಭಾರತ ಸದಾ ಸಿದ್ಧವಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಪ್ರಧಾನಿ ಮೋದಿ ದೂರವಾಣಿ ಸಂಭಾಷಣೆ ನಡೆಸಿದ್ದು, ಶಾಂತಿ ಮಾತುಕತೆ ಮೂಲಕ ಸಂಘರ್ಷಕ್ಕೆ ಅಂತ್ಯ ಹಾಡಲು ಹೇಳಿದ್ದಾರೆ.
ರಷ್ಯಾದೊಂದಿಗೆ ಯುದ್ಧವನ್ನು ನಿಲ್ಲಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯನ್ನು ಅನುಸರಿಸುವ ಅಗತ್ಯವನ್ನು ಪ್ರಧಾನಿ ಒತ್ತಿ ಹೇಳಿದ್ದಾರೆ. ಯುದ್ಧವನ್ನು ಆದಷ್ಟು ಬೇಗ ಕೊನೆಗೊಳಿಸಿ ಎಂದು ಸಲಹೆ ನೀಡಿದ್ದಾರೆ. ಸಂಘರ್ಷಕ್ಕೆ ಮಿಲಿಟರಿ ಯುದ್ಧವೇ ಪರಿಹಾರವಲ್ಲ. ಯುದ್ಧ ಅಂತ್ಯಕ್ಕೆ ಶಾಂತಿ ಪ್ರಯತ್ನ ಮಾಡುವುದಾದರೆ ಅದಕ್ಕೆ ಸಹಕಾರ ನೀಡಲು ಭಾರತ ಸದಾ ಸಿದ್ಧ ಎಂದಿದ್ದಾರೆ.