ದಿಗಂತ ವರದಿ ವಿಜಯಪುರ:
ಇಲ್ಲಿನ ಮಹಾನಗರ ಪಾಲಿಕೆ ಚುನಾವಣೆಯ ಮತದಾನ ಪ್ರಕ್ರಿಯೆ ಬಿರುಸು ಪಡೆದುಕೊಂಡಿದ್ದು, ಬೆಳಗ್ಗೆ 11 ಗಂಟೆ ವರೆಗೆ ಶೇ. 22.25 ರಷ್ಟು ಮತದಾನವಾಗಿದೆ.
ನಗರ ಪ್ರದೇಶದಲ್ಲಿ ಕೂಲಿ ಕೆಲಸ, ಕಾರ್ಯಗಳಿಗೆ ತೆರಳುವವರು ಬೆಳಗ್ಗೆಯೆ ಮತಕೇಂದ್ರಕ್ಕೆ ಆಗಮಿಸಿ, ಮತದಾನ ಮಾಡಿ, ಮತ್ತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದರು.
ಬೆಳಗ್ಗೆ 7 ಗಂಟೆಗೆ ಮಂದ ಗತಿಯಲ್ಲಿ ಆರಂಭಗೊಂಡ ಮತದಾನ ಅನಂತರ ಬಿರುಸು ಪಡೆದುಕೊಂಡಿದೆ. ಸ್ಥಳೀಯ ಬಡಾವಣೆಯ ನಿವಾಸಿಗಳು ತಂಡೋಪ ತಂಡವಾಗಿ ಆಗಮಿಸಿ, ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.