ಈ ವರ್ಷ ವ್ಯಾಲೆಂಟೈನ್ಸ್ ಡೇ ಆಚರಿಸೋಲ್ಲ ಅಂದ್ರು ವಿಕ್ಕಿ-ಕ್ಯಾಟ್, ಯಾಕೆ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದುವೆಯಾದ ವರ್ಷದಲ್ಲಿ ಯಾವ ಅವಕಾಶವನ್ನೂ ಬಿಡದೆ ಎಲ್ಲವನ್ನೂ ಸೆಲೆಬ್ರೇಟ್ ಮಾಡಲಾಗುತ್ತದೆ.
ತಿಂಗಳ ಆನಿವರ್ಸರಿ, ವ್ಯಾಲೆಂಟೈನ್ಸ್ ಡೇ ಕೂಡ ಇದರಲ್ಲಿ ಸೇರುತ್ತದೆ.
ಆದರೆ ಈಗಷ್ಟೇ ಮದುವೆಯಾದ ವಿಕ್ಕಿ ಕೌಶಲ್ ಹಾಗೂ ಕಟ್ರೀನಾ ಕೈಫ್ ಈ ಬಾರಿ ವ್ಯಾಲೆಂಟೈನ್ಸ್ ಡೇ ಆಚರಿಸೋದಿಲ್ವಂತೆ.
ಇದರ ಹಿಂದೆ ಅವರದ್ದು ಏನೋ ಸಿದ್ಧಾಂತ ಇರಬಹುದು ಅಂತ ಯೋಚಿಸ್ತಿದ್ದೀರಾ? ಖಂಡಿತಾ ಇಲ್ಲ, ವ್ಯಾಲೆಂಟೈನ್ಸ್ ಡೇ ಆಚರಣೆಗೆ ಸಮಯ ಇಲ್ವಂತೆ. ಕಟ್ರೀನಾ ಹಾಗೂ ವಿಕ್ಕಿ ಸಿನಿಮಾ ಶೂಟ್‌ನಲ್ಲಿ ಬ್ಯುಸಿ ಇದ್ದಾರೆ, ಆ ದಿನ ಕಟ್ರೀನಾ ಟೈಗರ್-3  ಶೂಟಿಂಗ್‌ನಲ್ಲಿ ಬ್ಯುಸಿ ಇದ್ದಾರೆ. ಹಾಗಾಗಿ ಈ ಬಾರಿ ಸೆಲೆಬ್ರೇಷನ್ ಸಾಧ್ಯ ಇಲ್ಲ ಎಂದು ಜೋಡಿ ಬೇಜಾರಾಗಿದ್ದಾರಂತೆ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!