ಕಿಂಗ್ ಚಾರ್ಲ್ಸ್-III ಮೇಲೆ ಮೊಟ್ಟೆ ಎಸೆದ ವ್ಯಕ್ತಿ: ಓರ್ವನ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಯಾರ್ಕ್ ನಗರಕ್ಕೆ ಭೇಟಿ ನೀಡುತ್ತಿದ್ದ ಇಂಗ್ಲೆಂಡ್‌ನ ಕಿಂಗ್ ಚಾರ್ಲ್ಸ್ III ಮತ್ತು ಕ್ವೀನ್ ಕಾನ್ಸಾರ್ಟ್, ಕ್ಯಾಮಿಲ್ಲಾ ಮೇಲೆ ಮೂರು ಮೊಟ್ಟೆಗಳ ಎಸೆದರಿವ ಘಟನೆ ನಡೆದಿದೆ. ಮೊಟ್ಟೆ ಎಸೆದಿದ್ದಕ್ಕಾಗಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.
ಮೊಟ್ಟೆಗಳನ್ನು ಎಸೆಯುವಾಗ ಬಂಧಿತ ವ್ಯಕ್ತಿ “ಈ ದೇಶವನ್ನು ಗುಲಾಮರ ರಕ್ತದಿಂದ ನಿರ್ಮಿಸಲಾಗಿದೆ” ಎಂದು ಕೂಗಿ ಆಕ್ರೋಶ ವ್ತಕ್ತಪಡಿಸಿದರು.

ಯಾವುದಕ್ಕೂ ತಲೆಕೆಡೆಸಿಕೊಳ್ಳದೆ ಚಾರ್ಲ್ಸ್ ಪಾದಚಾರಿ ಮಾರ್ಗದ ಮೇಲೆ ಬಿದ್ದ ಮೊಟ್ಟೆಗಳನ್ನು ದಾಟಿ ಹೆಜ್ಜೆ ಹಾಕಿದರು. ಚಾರ್ಲ್ಸ್ ಮತ್ತು ಕ್ಯಾಮಿಲ್ಲಾ ಅವರು ದಿವಂಗತ ರಾಣಿ ಎಲಿಜಬೆತ್ II ರ ಪ್ರತಿಮೆಯನ್ನು ಅನಾವರಣಗೊಳಿಸಲು ಭೇಟಿ ನೀಡಿದ್ದ ಸಂದರ್ಭದಲ್ಲಿ ಗಟನೆ ನಡೆದಿದೆ.

ಚಾರ್ಲ್ಸ್‌ ವಿರುದ್ಧ ಘೋಷಣೆಗಳು ಇದೇ ಮೊದಲೇನಲ್ಲ ಇದಕ್ಕೂ ಮೊದಲೇ ಸ್ಕಾಟ್‌ಲ್ಯಾಂಡ್‌ನ ಎಡಿನ್‌ಬರ್ಗ್‌ನಲ್ಲಿ “ರಾಜಪ್ರಭುತ್ವವನ್ನು ತೊಡೆದುಹಾಕು” ಎಂಬ ಚಿಹ್ನೆ ಹಿಡಿದಿದ್ದಕ್ಕಾಗಿ ಓರ್ವನನ್ನು ಬಂಧಿಸಲಾಗಿತ್ತು. ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ನಲ್ಲಿ ಚಾರ್ಲ್ಸ್‌ನನ್ನು ರಾಜ ಎಂದು ಔಪಚಾರಿಕವಾಗಿ ಘೋಷಿಸುವ ದಾಖಲೆಯನ್ನು ಗಟ್ಟಿಯಾಗಿ ಓದುವಾಗ ಕೂಡ “ಅವನನ್ನು ರಾಜನಾಗಿ ಆಯ್ಕೆ ಮಾಡಿದ್ದು ಯಾರು?” ಎಂದು ಕೂಗಿದ್ದಕ್ಕಾಗಿ ಇನ್ನೊಬ್ಬ ಮಹಿಳೆಯನ್ನು ಬಂಧಿಸಲಾಯಿತು.

ಬ್ರಿಟೀಷ್ ದೊರೆಗೆ ಮೊಟ್ಟೆ ಬಡಿದದ್ದು ಇದೇ ಮೊದಲಲ್ಲ. 1986 ರಲ್ಲಿ, ನ್ಯೂಜಿಲೆಂಡ್‌ನ ರಾಣಿಯ ರಾಜಮನೆತನದ ಪ್ರವಾಸದ ಸಮಯದಲ್ಲಿ, ಮಾವೋರಿ ಬುಡಕಟ್ಟುಗಳೊಂದಿಗೆ ಬ್ರಿಟನ್‌ನ ಒಪ್ಪಂದದ ವಿರುದ್ಧ ಪ್ರತಿಭಟಿಸುತ್ತಿರುವ ಮಹಿಳೆಯೊಬ್ಬರು ಮೊಟ್ಟೆಯಿಂದ ಹೊಡೆದಿದ್ದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!