ಪ್ರವಾಸ ಪ್ರಿಯರಿಗೆ ವಿದೇಶ ಪ್ರವಾಸ ಎಂದರೆ ಕನಸಿನ ಮಾತು. ಆದರೆ, ಹೆಚ್ಚಿನ ವೆಚ್ಚವೇ ಅಡ್ಡಿಯಾಗಿ, ಆ ಕನಸು ಸಾಕಾರವಾಗದೆ ಉಳಿಯುತ್ತದೆ. ವಾಸ್ತವದಲ್ಲಿ, ಜಾಗರೂಕ ಯೋಜನೆ, ಸರಿಯಾದ ಸಮಯದ ಆಯ್ಕೆ ಮತ್ತು ಸೂಕ್ತ ಸ್ಥಳಗಳ ಆಯ್ಕೆ ಮೂಲಕ ವಿದೇಶ ಪ್ರವಾಸವನ್ನು ಕಡಿಮೆ ವೆಚ್ಚದಲ್ಲೇ ಆನಂದಿಸಬಹುದು. ಏಷ್ಯಾ ಹಾಗೂ ಕೆಲವು ಯೂರೋಪ್ ದೇಶಗಳಲ್ಲಿ, ಭಾರತೀಯ ರೂಪಾಯಿಗೆ ಹೋಲಿಸಿದರೆ ಜೀವನ ವೆಚ್ಚ ಕಡಿಮೆ ಇರುವುದರಿಂದ ಪ್ರವಾಸ ವೆಚ್ಚ ಸಹ ಕೈಗೆಟುಕುವಂತಿರುತ್ತದೆ. ಕಡಿಮೆ ವೆಚ್ಚದಲ್ಲಿ ಉತ್ತಮ ಅನುಭವ, ಪ್ರಕೃತಿ ಸೌಂದರ್ಯ, ಐತಿಹಾಸಿಕ ಸ್ಥಳಗಳು, ಸ್ಥಳೀಯ ಸಂಸ್ಕೃತಿ ಮತ್ತು ರುಚಿಕರ ಆಹಾರವನ್ನು ಸವಿಯಲು ಕೆಲವು ತಾಣಗಳು ಪ್ರವಾಸಿಗರ ಮನ ಸೆಳೆಯುತ್ತವೆ.
ವಿದೇಶ ಪ್ರವಾಸ ಸರಿಯಾದ ಯೋಜನೆ ಮಾಡಿದರೆ 1 ಲಕ್ಷದೊಳಗೆ ಅದ್ಭುತ ಸ್ಥಳಗಳನ್ನು ಕಾಣಬಹುದು. ಇಲ್ಲಿವೆ ಕಡಿಮೆ ಖರ್ಚಿನಲ್ಲಿ ಭೇಟಿ ನೀಡಬಹುದಾದ ಏಳು ದೇಶಗಳು.
ಫಿಲಿಫೈನ್ಸ್
7,000ಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿರುವ ಫಿಲಿಫೈನ್ಸ್ ಪ್ರಕೃತಿ ಪ್ರಿಯರ ಪಾರಡೈಸ್ . ಸುಂದರ ಕಡಲತೀರಗಳು, ಸ್ಕೂಬಾ ಡೈವಿಂಗ್, ಹಾಗೂ ಸಾಹಸ ಕ್ರೀಡೆಗಳು ಇಲ್ಲಿ ಜನಪ್ರಿಯ. ಹಾಸ್ಟೆಲ್ ವಾಸತಿ ಹಾಗೂ ಸ್ಟ್ರೀಟ್ ಫುಡ್‌ನ್ನು ಆರಿಸಿದರೆ ಖರ್ಚು ಕಡಿಮೆ.
ವಿಯೆಟ್ನಾಂ
ಹೋ ಚಿ ಮಿನ್ಹ್‌ನ ಬೀದಿ ಆಹಾರ, ಹ್ಯಾಲೊಂಗ್ ಕೊಲ್ಲಿಯ ನೈಸರ್ಗಿಕ ಸೌಂದರ್ಯ ಪ್ರವಾಸಿಗರನ್ನು ಸೆಳೆಯುತ್ತದೆ. ಸಾರ್ವಜನಿಕ ಸಾರಿಗೆ ಮತ್ತು ಕೈಗೆಟುಕುವ ಹೋಟೆಲ್‌ಗಳೊಂದಿಗೆ ಬಜೆಟ್ ಪ್ರಯಾಣಕ್ಕೆ ಅತ್ಯುತ್ತಮ.
ಯುಎಇ
ದುಬೈ, ಅಬುಧಾಬಿ, ಶಾರ್ಜಾ, ಅಲ್ ಐನ್ ಎಲ್ಲವೂ ಪ್ರವಾಸಿಗರ ಕನಸು. ಬುರ್ಜ್ ಖಲೀಫಾ, ಡೆಸರ್ಟ್ ಸಫಾರಿ, ಹೆರಿಟೇಜ್ ಮ್ಯೂಸಿಯಂಗಳು ಇಲ್ಲಿನ ವಿಶೇಷ. ದುಬಾರಿ ಹೋಟೆಲ್‌ಗಳ ಬದಲಿಗೆ Airbnb ಉತ್ತಮ ಆಯ್ಕೆ.
ಥೈಲ್ಯಾಂಡ್
ಬ್ಯಾಂಕಾಕ್‌ನ ರಾತ್ರಿಜೀವನ, ಭವ್ಯ ದೇವಾಲಯಗಳು, ಕ್ರಾಬಿ ಹಾಗೂ ಫುಕೆಟ್‌ನ ಬೀಚ್‌ಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಬಜೆಟ್ ಫ್ರೆಂಡ್ಲಿ ದೇಶವಾಗಿರುವುದರಿಂದ ಕಡಿಮೆ ವೆಚ್ಚದಲ್ಲಿ ಹೆಚ್ಚು ಅನುಭವಿಸಬಹುದು.
ಮಲೇಷ್ಯಾ
ಲಂಕಾವಿಯ ಬೀಚ್‌ಗಳು, ಬೊರ್ನಿಯೊ ಕಾಡುಗಳು, ಕೌಲಾಲಂಪುರ್‌ನ ಗಗನಚುಂಬಿ ಕಟ್ಟಡಗಳು ಇಲ್ಲಿನ ಆಕರ್ಷಣೆ. ಬೀಚ್ ಪ್ರಿಯರಿಗೆ ಸೂಕ್ತ ತಾಣ. ಬೀದಿ ಆಹಾರ ಮತ್ತು ಪಬ್ಲಿಕ್ ಟ್ರಾನ್ಸ್‌ಪೋರ್ಟ್ ಬಳಸಿದರೆ ಹಣ ಉಳಿಸಬಹುದು.
ಶ್ರೀಲಂಕಾ
ಪ್ರಶಾಂತ ಕಡಲತೀರಗಳು, ಪುರಾತನ ಅವಶೇಷಗಳು, ಚಹಾ ತೋಟಗಳೊಂದಿಗೆ ಶ್ರೀಲಂಕಾ ಪ್ರಕೃತಿ ಮತ್ತು ಇತಿಹಾಸದ ಸಂಯೋಜನೆ. ಒಂದು ವಾರದ ಪ್ರವಾಸವನ್ನು 50,000 ರೂ. ಒಳಗೆ ಯೋಜಿಸಬಹುದು.
ಸಿಂಗಾಪುರ್
ಚೈನಾಟೌನ್, ಬುದ್ಧ ಟೂತ್ ರೆಲಿಕ್ ದೇವಸ್ಥಾನ, ಸೆಂಟೋಸಾ ದ್ವೀಪ ಮತ್ತು ಗಾರ್ಡನ್ಸ್ ಬೈ ದ ಬೇ ಇಲ್ಲಿನ ಪ್ರಮುಖ ತಾಣಗಳು. ಹಾಸ್ಟೆಲ್ ಅಥವಾ Airbnb ಮೂಲಕ ಕಡಿಮೆ ವೆಚ್ಚದಲ್ಲಿ ಉಳಿದುಕೊಳ್ಳಬಹುದು.