ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕ್ರಾಂತಿ ಸಿನಿಮಾದ ಎರಡನೇ ಲಿರಿಕಲ್ ವಿಡಿಯೋ ಸಾಂಗ್ ಬಿಡುಗಡೆ ಸಮಯದಲ್ಲಿ ಗುಂಪಿನಿಂದ ಚಪ್ಪಲಿ ಎಸೆದಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬೊಂಬೆಬೊಂಬೆ ಲಿರಿಕಲ್ ಹಾಡು ಬಿಡುಗಡೆ ವೇಳೆ ಕೆಳಗಿದ್ದ ಗುಂಪಿನೊಂದು ಚಪ್ಪಲಿ ಎಸೆದಿದ್ದು, ದರ್ಶನ್ಗೆ ಬಂದು ತಗುಲಿತ್ತು. ಅವರ ಪೋಸ್ಟರ್ ಕೂಡ ಹರಿದುಹಾಕಲಾಗಿತ್ತು.
ಇದು ಅಪ್ಪು ಅಭಿಮಾನಿಗಳ ಕೆಲಸ ಎನ್ನಲಾಗಿತ್ತು. ಸ್ಟಾರ್ ಇಬ್ಬರ ನಡುವಿನ ಫ್ಯಾನ್ಸ್ ವಾರ್ ಅತಿರೇಖಕ್ಕೆ ಹೋಗಿ ಈ ಅವಘಡ ಸಂಭವಿಸಿತ್ತು. ಕಾರ್ಯಕ್ರಮದ ಆಯೋಜಕರು ದೂರು ನೀಡಿದ್ದು, ಮೂವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

