ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮ್ಮ ಸಾವು ಹೀಗೂ ಬರಬಹುದಾ ಎಂದು ಅವರೇ ಊಹಿಸದ ರೀತಿಯಲ್ಲಿ ಅವರನ್ನು ಹೊಡೆಯುತ್ತೀವಿ ಎಂದು ಪ್ರಧಾನಿ ಮೋದಿ ಗುಡುಗಿದ್ದಾರೆ.
ಪಹಲ್ಗಾಮ್ನಲ್ಲಿ ಟೂರಿಸ್ಟ್ಗಳನ್ನು ನಿರ್ದಾಕ್ಷಿಣ್ಯವಾಗಿ ಕೊಂದಿರುವ ಟೆರರಿಸ್ಟ್ಗಳನ್ನು ಸುಮ್ಮನೆ ಬಿಡುವ ಮಾತೇ ಇಲ್ಲ. ಎಲ್ಲಿಯೇ ಅಡಗಿರಲಿ ಹುಡುಕಿ ಹೊಡೆಯುತ್ತೀವಿ ಎಂದಿದ್ದಾರೆ.
ಕೇವಲ ಜನರ ಮೇಲೆ ಮಾಡಿದ ದಾಳಿ ಅದಲ್ಲ ಆ ದಾಳಿ ಭಾರತ ಆತ್ಮದ ಮೇಲಾಗಿದೆ, ಯಾರು ಈ ದುಸ್ಸಾಹಸ ಮಾಡಿದ್ದಾರೋ, ಯಾರು ಈ ದಾಳಿಯ ಹಿಂದಿದ್ದಾರೋ, ಅವರಿ ಕಲ್ಪನೆಗೂ ಮೀರಿದ ಶಿಕ್ಷೆಯನ್ನು ಅವರಿಗೆ ಕೊಡುತ್ತೇವೆ ಎಂದು ಹೇಳಿದ್ದಾರೆ.
ಉಗ್ರರನ್ನು ಹೆಡೆಮುರಿ ಕಟ್ಟಿ ನಮ್ಮ ದೇಶದಿಂದ ಹೊರ ಹಾಕುವ ಸಮಯ ಬಂದಿದೆ. ಭಾರತೀಯರೆಲ್ಲರೂ ಒಗ್ಗಟ್ಟಿನಲ್ಲಿದ್ದರೆ ಉಗ್ರರ ಸೊಂಟ ಮುರುಯುವುದೇನೂ ಕಷ್ಟವಲ್ಲ. ಈ ಭೂಮಿಯಿಂದಲೇ ಅವರನ್ನು ಹೊರಗಟ್ಟುತ್ತೇವೆ. ಯಾರು ಮಾನವೀಯತೆ ನಂಬಿದ್ದಾರೋ ಅವರು ನಮ್ಮ ಜತೆಗಿದ್ದಾರೆ. ಸುಮ್ಮನೆ ಬಿಡುವ ಮಾತೇ ಇಲ್ಲ ಎಂದಿದ್ದಾರೆ.

