ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂಡೋನೇಷ್ಯಾದ ಬೋರ್ನಿಯೋ ದ್ವೀಪಗಳಲ್ಲಿರುವ ಕಾಲಿಮಂಥನ್ ಎಂಬ ಪ್ರದೇಶದಲ್ಲಿ ಇಂಡೋನೇಷ್ಯಾದ ಹೊಸ ರಾಜಧಾನಿ ‘ನುಸಾಂತರಾ’ ತಲೆ ಎತ್ತಲಿದೆ.
ಹೌದು, ಹವಾಮಾನ ಬದಲಾವಣೆಯಿಂದ ಸಮುದ್ರ ಮಟ್ಟದಲ್ಲಿ ಏರಿಕೆಯಾಗಿ, ವಿಶ್ವದಲ್ಲಿ ಅತ್ಯಂತ ವೇಗವಾಗಿ ಮುಳುಗುತ್ತಿರುವ ನಗರಗಳಲ್ಲಿ ಇಂಡೋನೇಷ್ಯಾದ ರಾಜಧಾನಿ ಜಕಾರ್ತ ಕೂಡ ಒಂದಾಗಿದೆ.
ಈ ಕಾರಣದಿಂದಾಗಿ ತಮ್ಮ ರಾಜಧಾನಿ ಬದಲಾಯಿಸಲು ಇಂಡೋನೇಷ್ಯಾ ಸರ್ಕಾರ ನಿರ್ಧರಿಸಿದೆ. ಪಾರ್ಲಿಮೆಂಟ್ನಲ್ಲಿ ಇತ್ತೀಚೆಗಷ್ಟೇ ಮಸೂದೆ ಮಂಡನೆಯಾಗಿದ್ದು, ಸ್ಥಳ ಬದಲಾವಣೆಗೆ ಒಪ್ಪಿಗೆ ಸಿಕ್ಕಿದೆ.
ಹೊಸ ರಾಜಧಾನಿಗೆ ‘ನುಸಾಂತರಾ’ ಎನ್ನುವ ಹೆಸರಿಡಲು ಪ್ರಸ್ತಾಪ ಆಗಿದೆ. ಈ ಮಸೂದೆ ಕಾಯ್ದೆಯಾಗಿ ಬದಲಾದ ನಂತರ ಜಕಾರ್ತ ರಾಜಧಾನಿಯಾಗಿ ಉಳಿಯುವುದಿಲ್ಲ.
ಜಾವಾ ಸಮುದ್ರದ ಕರಾವಳಿ ನಗರ ಜಕಾರ್ತದಲ್ಲಿ ಹವಾಮಾನ ಬದಲಾವಣೆಯಿಂದ ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಅಗಾಧವಾದ ಮಂಜು ಮತ್ತು ಹಿಮಾಲಯಗಳಂಥ ಪರ್ವತ ಕರಗಿ ಮಂಜು ಸಮುದ್ರಕ್ಕೆ ಹರಿಯುತ್ತದೆ. ಇದರಿಂದ ಸಮುದ್ರಮಟ್ಟ ಏರಿಕೆಯಾಗುತ್ತಿದೆ. ಜೊತೆಗೆ ಜಕಾರ್ತದ ಶೇ.65 ರಷ್ಟು ಮಂದಿ ನಿತ್ಯ ಚಟುವಟಿಕೆಗಳಿಗಾಗಿ ಬೋರ್ವೆಲ್ ಮೂಲಕ ಅಂತರ್ಜಲ ಬಳಸುತ್ತಾರೆ. ಹೆಚ್ಚಾಗಿ ಇದನ್ನು ಬಳಸುವ ಕಾರಣ ಆ ಪ್ರದೇಶ ಕ್ರಮೇಣವಾಗಿ ಕುಸಿಯುತ್ತದೆ.
