ಹೊಸ ದಿಗಂತ ವರದಿ,ಶ್ರೀರಂಗಪಟ್ಟಣ :
ತಾಲೂಕಿನ ಹೊಸ ಉಂಡವಾಡಿ ಗ್ರಾಮದ ರೈಲ್ವೆ ನಿಲ್ದಾಣದ ಸಮೀಪದಲ್ಲಿನ ಶನಿಮಠದಲ್ಲಿನ ಹುಲ್ಲಿನ ಮೆದೆಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು, ಗೋವುಗಳಾಗಿ ಸಂಗ್ರಹಿಸಿದ ಹುಲ್ಲಿನ ರಾಸಿ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದೆ.
ಮಂಗಳವಾರ ಮಧ್ಯರಾತ್ರಿ ಕಿಡಿಗೇಡಿಗಳು ಈ ಘಟನೆ ನಡೆಸಿದಿದ್ದು, ಬೆಂಕಿಯ ಜ್ವಾಲೆಗೆ ಗೋವುಗಳಾಗಿ ಸಂಗ್ರಹಿಸಿದ ಹುಲ್ಲಿನ ಮೆದೆ ಸಹ ಬೆಂಕಿಗಾಹುತಿಯಾಗಿದೆ. ಸ್ಥಳೀಯರು ಆಗಮಿಸಿ ಮಠದ ಗೋಶಾಲೆಯಲಿದ್ದ ಗೋವುಗಳು ರಕ್ಷಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳಿಂದ ಕಾರ್ಯಾಚರಣೆ ನಡೆಸಿ ಹೆಚ್ಚಿನ ಅನಾಹುತವನ್ನು ತಪ್ಪಿಸಿದ್ದಾರೆ.
ದೂರು ದಾಖಲು : ಮಠದ ಪಕ್ಕದ ಜಮೀನಿನ ಮಾಲೀಕ ಸುನಿಲ್ ಬಿರಾದಾರ್ ಪಾಟೀಲ್ ಎಂಬುವವರು ಶನಿ ಮಠದ ವಿರೋದಿಗಳಾಗಿದ್ದು, ಶನಿ ದೇಗುಲದ ಅಭಿವೃದ್ಧಿ ಸಹಿಸದೆ, ನಮ್ಮ ಮಠಕ್ಕೆ ಹಾನಿ ಮಾಡುವ ಉದ್ದೇಶದಿಂದ ಸುಮಾರು 15 ಸಾವಿರ ಮೌಲ್ಯದ ಹುಲ್ಲಿನ ಮೆದೆಗೆ ಬೆಂಕಿಹಾಕಿರ ಬಹುದು ಎಂದು ಶನಿಮಠದ ವ್ಯವಸ್ಥಾಪಕಿ ಚಂದ್ರಕಲಾ ಕೆಆರ್ಎಸ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ.
