ಹೊಸದಿಗಂತ ಡಿಜಿಟಲ್ ಡೆಸ್ಕ್:
ಖ್ಯಾತ ಮಲಯಾಳಂ ನಿರ್ದೇಶಕ ಮತ್ತು ಚಿತ್ರಕಥೆಗಾರ ಸಿದ್ದಿಕ್ (63) ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ನ್ಯುಮೋನಿಯಾ ಮತ್ತು ಇತರ ಉಸಿರಾಟದ ಸಮಸ್ಯೆಗಳ ಚಿಕಿತ್ಸೆಗಾಗಿ ಸಿದ್ದಿಕಿ ಜುಲೈ 10, 2023 ರಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಸೋಮವಾರ ಮಧ್ಯಾಹ್ನ 3 ಗಂಟೆಗೆ ಹೃದಯಾಘಾತ ಸಂಭವಿಸಿತ್ತು.ತಕ್ಷಣವೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದ್ರೆ ಮಂಗಳವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಸಿದ್ದಿಕಿ ಅವರು ಪತ್ನಿ ಸಜಿತಾ ಮತ್ತು ಮೂವರು ವಯಸ್ಕ ಮಕ್ಕಳನ್ನು ಅಗಲಿದ್ದಾರೆ.
![]()
ಹಲವು ವರ್ಷಗಳಿಂದ ಸಿದ್ಧಿಕಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಗೆಳೆಯ ಲಾಲ್ ಜೊತೆ ಸೇರಿ ಅವರು ಅನೇಕ ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಸಿದ್ಧಿಕಿ-ಲಾಲ್ ಎಂದೇ ಖ್ಯಾತರಾದ ಅವರಿಬ್ಬರು ಜಂಟಿಯಾಗಿ ಅನೇಕ ಸಿನಿಮಾಗಳಿಗೆ ಕಥೆ-ಚಿತ್ರಕಥೆಯನ್ನೂ ಬರೆದಿದ್ದಾರೆ.
ಲಾಲ್ ಅವರು ‘ತೆಂಕಾಸಿಪಟ್ಟಣಂ’, ‘ತೊಮ್ಮನುಮ್ ಮಕ್ಕಳು’ ಮತ್ತು ‘ಸಾಲ್ಟ್ ಅಂಡ್ ಪೆಪ್ಪರ್’ ಮುಂತಾದ ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಸಿದ್ಧಿಕ್-ಲಾಲ್’ ಸಿನಿಮಾಗಳಾದ ‘ರಾಮ್ಜಿ ರಾವ್ ಸ್ಪೀಕಿಂಗ್’, ‘ಇನ್ ಹರಿಹರ್ ನಗರ’, ‘ಗಾಡ್ಫಾದರ್’, ‘ವಿಯೆಟ್ನಾಂ ಕಾಲೋನಿ’ ಮತ್ತು ‘ಕಾಬೂಲಿವಾಲಾ’ ಭಾರಿ ಹಿಟ್ ಆಗಿದ್ದವು.
ಸಿದ್ದಿಕ್ ಅವರ ಕೆಲವು ಜನಪ್ರಿಯ ಏಕವ್ಯಕ್ತಿ ನಿರ್ದೇಶನಗಳಲ್ಲಿ ಹಿಟ್ಲರ್, ಫ್ರೆಂಡ್ಸ್, ಕ್ರಾನಿಕ್ ಬ್ಯಾಚುಲರ್ ಮತ್ತು ಬಾಡಿಗಾರ್ಡ್ ಸೇರಿವೆ.
