ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನಿ ಮೋದಿ ಅವರ ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸಲು ದೇಶಾದ್ಯಂತ ರೈಲ್ವೆ ನಿಲ್ದಾಣಗಳಲ್ಲಿ ಸೆಲ್ಫಿ ಬೂತ್ ಸ್ಥಾಪಿಸಲಾಗುತ್ತದೆ.
ಈ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿದ್ದು, ಸ್ವಪ್ರಚಾರದ ಗೀಳಿಗೆ ಮಿತಿಯೇ ಇಲ್ವಾ, ಈ ರೀತಿ ಅಗ್ಗದ ಪ್ರಚಾರ ಮಾಡೋದು ಸರಿಯಾ ಎಂದು ಪ್ರಶ್ನಿಸಿದ್ದಾರೆ.
ಎ ಶ್ರೇಣಿಯ ರೈಲು ನಿಲ್ದಾಣಗಳಲ್ಲಿ ತ್ರೀಡಿ ಸೆಲ್ಫಿ ಬೂತ್ ಮಾಡಲಾಗಿದೆ. ಇದರಲ್ಲಿ ಪ್ರಧಾನಿ ಮೋದಿ ಜೊತೆ ಸೆಲ್ಫಿ ಕ್ಲಿಕ್ಕಿಸೋಕೆ ಅವಕಾಶ ನೀಡಲಾಗಿದೆ. ಒಂದು ಬೂತ್ ಸ್ಥಾಪನೆಗೆ 1.25 ಲಕ್ಷ ರೂಪಾಯಿ ಬೇಕು. ಪರ್ಮನೆಂಟ್ ಬೂತ್ ಮಾಡಲು 6.25 ಲಕ್ಷ ರೂಪಾಯಿ ಬೇಕು. ಇಲ್ಲಿ ಅನಾವಶ್ಯಕ ಹಣ ವ್ಯಯಿಸುವಾಗ ರೈತರು, ಬರ ಪರಿಹಾರ ಕಣ್ಣಿಗೆ ಕಾಣೋದಿಲ್ವಾ ಎಂದು ಪ್ರಶ್ನಿಸಿದ್ದಾರೆ.