ಹೊಸದಿಗಂತ ಡಿಜಿಟಲ್ ಡೆಸ್ಕ್ :
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಅರ್ಜೆಂಟೀನಾ ಫುಟ್ ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ (Lionel Messi)ಯ ಜೆರ್ಸಿ ಉಡುಗೊರೆಯಾಗಿ ಸಿಕ್ಕಿದೆ.
ಅರ್ಜೆಂಟೀನಾದ ಸರಕಾರಿ ಇಂಧನ ಸಂಸ್ಥೆಯ ವೈಪಿಎಫ್ನ ಮುಖ್ಯಸ್ಥರಾದ ಪ್ಯಾಬ್ಲೊ ಗೊನ್ಜಾಲೆಜ್ ಅವರು ಪ್ರಧಾನಿ ಮೋದಿಯನ್ನು ಭೇಟಿಯಾದ ಸಂದರ್ಭದಲ್ಲಿ ಸ್ಮರಣಿಕೆಯಾಗಿ ಜೆರ್ಸಿಯನ್ನು ನೀಡಿದ್ದಾರೆ.
ಗೊನ್ಜಾಲೆಜ್ ಭಾರತದಲ್ಲಿ ನಡೆಯುತ್ತಿರುವ ಇಂಧನ ಸಪ್ತಾಹಕ್ಕಾಗಿ ಭಾರತಕ್ಕೆ ಬಂದಿದ್ದಾರೆ.ಈ ವೇಳೆ ಅವರು ಪ್ರಧಾನಿ ಮೋದಿ ಹಾಗೂ ವಿದೇಶಾಂಗ ಸಚಿವ ಜೈಶಂಕರ್ ಅವರನ್ನು ಭೇಟಿಯಾಗಿ ಜೆರ್ಸಿ ಕೊಟ್ಟಿದ್ದಾರೆ.
ಈ ಹಿಂದೆ ಅರ್ಜೆಂಟೀನಾ ತಂಡ ಫುಟ್ಬಾಲ್ ವಿಶ್ವ ಕಪ್ ಗೆದ್ದ ತಕ್ಷಣ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಟ್ವೀಟ್ ಮೂಲಕ ಶುಭಾಶಯ ಕೋರಿದ್ದರು.