ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಕ್ಟೋಬರ್ ಇಂದಿನಿಂದ (12ರಿಂದ14)ಎರಡು ದಿನಗಳ ಕಾಲ ತ್ರಿಪುರಾ ಮತ್ತು ಅಸ್ಸಾಂ ಪ್ರವಾಸ ಕೈಗೊಂಡಿದ್ದು, ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ ಎಂದು ರಾಷ್ಟ್ರಪತಿ ಭವನ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಿದೆ.
ರಾಷ್ಟ್ರಪತಿಗಳು ತ್ರಿಪುರಾ ರಾಜ್ಯ ನ್ಯಾಯಾಂಗ ಅಕಾಡೆಮಿಯನ್ನು ಉದ್ಘಾಟಿಸಲಿದ್ದು, ಅಗರ್ತಲಾದ ನರಸಿಂಗಢದಲ್ಲಿ ತ್ರಿಪುರ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಜೊತೆಗೆ ತ್ರಿಪುರಾ ಸರ್ಕಾರದ ವಿವಿಧ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಜೆ ರಾಷ್ಟ್ರಪತಿಯವರು ಅಗರ್ತಲಾದಲ್ಲಿ ತ್ರಿಪುರಾ ಸರ್ಕಾರ ಗೌರವಾರ್ಥವಾಗಿ ಆಯೋಜಿಸುವ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮರುದಿನ ಅಗರ್ತಲಾ ರೈಲು ನಿಲ್ದಾಣದಿಂದ, ಗುವಾಹಟಿ-ಕೋಲ್ಕತ್ತಾ-ಗುವಾಹಟಿ ರೈಲಿನವಿಸ್ತರಣೆ ಮತ್ತು ಅಗರ್ತಲಾ-ಜಿರಿಬಾಮ್-ಅಗರ್ತಲಾ ಜನ ಶತಾಬ್ದಿ ಎಕ್ಸ್ಪ್ರೆಸ್ ಅನ್ನು ಮಣಿಪುರದ ಖೋಂಗ್ಸಾಂಗ್ವರೆಗೆ ವಿಸ್ತರಿಸಲಿದ್ದಾರೆ. ಜೊತೆಗೆ ಕೇಂದ್ರೀಯ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಅಸ್ಸಾಂ ಸರ್ಕಾರದ ವಿವಿಧ ಯೋಜನೆಗಳಿಗೆ ಅಡಿಪಾಯ ಹಾಕುತ್ತಾರೆ.
ಅಸ್ಸಾಂ ಸರ್ಕಾರ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಪ್ರಾಧಿಕಾರ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ, ಹಾಗೂ ರೈಲ್ವೆ ಸಚಿವಾಲಯಗಳ ವಿವಿಧ ಯೋಜನೆಗಳಿಗೆ ಉದ್ಘಾಟನೆ ಮತ್ತು ಅಡಿಪಾಯ ಹಾಕಲಿದ್ದಾರೆ.
ಸಿಲ್ಚಾರ್ನ ಮೊಯಿನಾರ್ಬಾಂಡ್ನಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ನ ರೈಲ್-ಫೆಡ್ ಪೆಟ್ರೋಲಿಯಂ ಶೇಖರಣಾ ಡಿಪೋ ಉದ್ಘಾಟನೆ, ಎರಡು ಹೆದ್ದಾರಿ ಯೋಜನೆಗಳು, ಅಸ್ಸಾಂನ ಚಹಾ ತೋಟದ ಪ್ರದೇಶಗಳಲ್ಲಿ 100 ಮಾದರಿ ಮಾಧ್ಯಮಿಕ ಶಾಲೆಗಳಿಗೆ ಅಡಿಪಾಯ ಹಾಕಲಿದ್ದಾರೆ.
ರಾಷ್ಟ್ರಪತಿ ಮುರ್ಮು ಅವರು ತ್ರಿಪಪುರಾಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಅಗರ್ತಲಾ ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ರಾಷ್ಟ್ರಪತಿ ಭೇಟಿಯ ಭದ್ರತಾ ವ್ಯವಸ್ಥೆಯ ಮೇಲ್ವಿಚಾರಣೆಗಾಗಿ ದೆಹಲಿಯಿಂದ ಉನ್ನತ ಮಟ್ಟದ ಭದ್ರತಾ ತಂಡ ಈಗಾಗಲೇ ಇಲ್ಲಿಗೆ ಆಗಮಿಸಿದೆ.
