ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನ ರಾಮನಾಥಪುರಂನಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಹೊಸ ಪಂಬಮ್ ಸೇತುವೆಯನ್ನು ಉದ್ಘಾಟಿಸಿದರು.
ತಮಿಳುನಾಡಿನ ಪಾಕ್ ಜಲಸಂಧಿಯನ್ನು ವ್ಯಾಪಿಸಿರುವ 2.07 ಕಿಲೋಮೀಟರ್ ಉದ್ದದ ಹೊಸ ಪಂಬನ್ ಸೇತುವೆ ಭಾರತದ ಎಂಜಿನಿಯರಿಂಗ್ ಕೌಶಲ್ಯ ಮತ್ತು ದೂರದೃಷ್ಟಿಯ ಮೂಲಸೌಕರ್ಯ ಅಭಿವೃದ್ಧಿಗೆ ಸಾಕ್ಷಿಯಾಗಿದೆ.
ಪ್ರಧಾನಿ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಅವರೊಂದಿಗೆ ಸಮುದ್ರ ಸೇತುವೆಯ ಮೂಲಕ ಪ್ರಯಾಣಿಸುವ ಮೊದಲ ರೈಲಿಗೆ ಹಸಿರು ನಿಶಾನೆ ತೋರಿದರು.
ಇಂದು ಮುಂಜಾನೆ, ಪಂಬಮ್ ಸೇತುವೆಯಲ್ಲಿ ಕೇಂದ್ರ ಸಚಿವ ವೈಷ್ಣವ್ ಬಿಜೆಪಿ ಧ್ವಜವನ್ನು ಹಾರಿಸುತ್ತಿದ್ದಂತೆ, ಪಕ್ಷದ ಸಂಸ್ಥಾಪನಾ ದಿನದಂದು ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದರು.