ಹೊಸದಿಗಂತ ಡಿಜಿಟಲ್ ಡೆಸ್ಕ್:
2-3 ತಿಂಗಳಲ್ಲಿ ಆಪರೇಷನ್ ಹಸ್ತ ಆಗಲ್ಲ, ಆಪರೇಷನ್ ಕಮಲ ಆಗುತ್ತದೆ, ಕಾದು ನೋಡಿ ಎಂದು ಮಾಜಿ ಸಚಿವ ಮುರುಗೇಶ್ ನಿರಾಣಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಬಾದಾಮಿ ತಾಲೂಕಿನ ಕೆರಕಲಮಟ್ಟಿ ಗ್ರಾಮದಲ್ಲಿ ಮಾತನಾಡಿದ ಮಾಜಿ ಸಚಿವ ನಿರಾಣಿ , ಬೇಕಾದರೆ ಕಾದು ನೋಡಿ ಇನ್ನೂ 2-3 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾತ ಪತನವಾಗಲಿದೆ. ಆಪರೇಷನ್ ಹಸ್ತ ಆಗಲ್ಲ, ಆಪರೇಷನ್ ಕಮಲ ಆಗುತ್ತದೆ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಎಂ ಎಲ್ ಎ ಟಿಕೆಟ್ ಕೊಡಲ್ಲ, ಕೆಲಸ ಮಾಡಿ ಅಂದ್ರೂ ಮಾಡ್ತೀನಿ. ಪಕ್ಷಕ್ಕಾಗಿ ಕೆಲಸ ಮಾಡುತ್ತೇನೆ. ಕಳೆದ ಬಾರಿ ಕೂಡ ನಾನು ಇದನ್ನೇ ಹೇಳಿದ್ದೇ ಎಂದರು.
ಉಚಿತ ಬಸ್ ಯೋಜನೆಯಿಂದ ಶಾಲಾ ಮಕ್ಕಳಿಗೆ ಬಹಳ ತೊಂದರೆಯಾಗಿದೆ. ಶಾಲಾ ಮಕ್ಕಳು ಹಾಗೂ ಕೆಲಸಕ್ಕೆ ಹೋಗುವವರಿಗೆ ಬಸ್ ಕುಳಿತುಕೊಳ್ಳಲು ಸೀಟ್ ಸಿಗುತ್ತಿಲ್ಲ, ಬಸ್ ಗಳು ರಶ್ ಆಗಿರುತ್ತದೆ ಎಂದರು. ಉಚಿತ ವಿದ್ಯುತ್ ಯೋಜನೆಯಿಂದ ಮನೆ ಸಣ್ಣ ಕೈಗಾರಿಕೆಗಳಿಗೆ ಕನಿಷ್ಠ 60% ಗಿಂತಲೂ ಹೆಚ್ಚುವರಿ ಬಿಲ್ ಬರುತ್ತಿದೆ ಎಂದು ಸಚಿವ ಮುರುಗೇಶ್ ನಿರಾಣಿ ಸರಕಾರ ವಿರುದ್ಧ ವಾಗ್ದಾಳಿ ನಡೆಸಿದರು.