ಹೊಸದಿಗಂತ ವರದಿ, ಕಲಬುರಗಿ
ಆಳಂದ ಪಟ್ಟಣದ ಲಾಡ್ಲೆ ಮಶಾಕ್ ದಗಾ೯ದಲ್ಲಿರುವ ರಾಘವ ಚೈತನ್ಯ,ರ ಶಿವಲಿಂಗ ಶುದ್ದೀಕರಣಕ್ಕೆ ತೆರಳಬೇಕಿದ್ದ,ಜೇವರ್ಗಿ ಆಂದೋಲಾ ಕರುಣೇಶ್ವರ ಮಠದ ಹಾಗೂ ಶ್ರೀ ರಾಮ ಸೇನೆಯ ರಾಜ್ಯ ಗೌರವಾಧ್ಯಕ್ಷ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳನ್ನು ಮಾಗ೯ದ ಮಧ್ಯೆಯೇ ಪೋಲಿಸರು ತಮ್ಮ ವಶಕ್ಕೆ ಪಡೆದ ಸನ್ನೀವೇಶ ನಡೆದಿದೆ.
ಜೇವರ್ಗಿ ಯಿಂದ ಕಲಬುರಗಿ ನಗರಕ್ಕೆ ಆಗಮಿಸಿ, ನಂತರ ಆಳಂದ ಪಟ್ಟಣಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಕಲಬುರಗಿ ನಗರದ ಹೊರವಲಯದ ರೇಡಿಯೋ ಸ್ಟೇಷನ ಬಳಿ ಪೋಲಿಸರು ಶ್ರೀಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.
ಇದಕ್ಕೂ ಮುನ್ನ ಅಂದೋಲಾ ಶ್ರೀಗಳಿಗಳು ಸೇರಿದಂತೆ ಪ್ರಮೋದ್ ಮುತಾಲಿಕ್ ಹಾಗೂ ಚೈತ್ರಾ ಕುಂದಾಪುರ ಅವರಿಗೆ ಆಳಂದ ಪಟ್ಟಣಕ್ಕೆ ಆಗಮಿಸದಂತೆ ನಿಭ೯ಂಧ ಹೇರಿ ಜಿಲ್ಲಾಡಳಿತ ಆದೇಶ ಹೊರಡಿಸಿತ್ತು.

