ಕರ್ಮ ಫಲದಾತ ಶನಿ ದೇವರ ಕುರಿತು ಪುರಾಣ ಇತಿಹಾಸದಲ್ಲಿ ಅನೇಕ ಕಥೆಗಳಿವೆ. ಯಾರ ಮೇಲೂ ಶನಿ ನೋಟ ಬಿದ್ದರೆ ಅವರಿಗೆ ಸಂಕಷ್ಟಗಳ ಸರಮಾಲೆ ಶುರುವಾಗುತ್ತದೆ ಎನ್ನುವುದು ಯಾಕೆ? ಇದರ ಹಿಂದಿದೆ ಒಂದು ಶಾಪದ ಕಥೆ.
ಪುರಾಣ ಕಥೆಗಳ ಪ್ರಕಾರ, ಶನಿದೇವನು ಬಾಲ್ಯದಿಂದಲೂ ಶ್ರೀ ಕೃಷ್ಣನ ಭಕ್ತನಾಗಿದ್ದನು. ಶನಿದೇವನು ಚಿತ್ರರಥನ ಮಗಳು ದಾಮಿನಿಯನ್ನು ಮದುವೆಯಾದನು. ದಾಮಿನಿ ಮಕ್ಕಳನ್ನು ಹೊಂದುವ ಆಸೆಯಿಂದ ತನ್ನ ಪತಿಯ ಬಳಿ ಬಂದಳು. ಆದರೆ, ಶನಿದೇವನು ಶ್ರೀ ಕೃಷ್ಣನ ಆರಾಧನೆಯಲ್ಲಿ ಮಗ್ನನಾಗಿದ್ದನು. ಈ ವೇಳೆ ಆಕೆ ಶನಿ ಗಮನ ಸೆಳೆಯಲು ಎಷ್ಟು ಪ್ರಯತ್ನಿಸಿದರೂ ಅದು ಸಫಲವಾಗಲಿಲ್ಲ.
ಶನಿದೇವನಿಗಾಗಿ ಕಾದು ಸುಸ್ತಾದ ದಾಮಿನಿ, ಶನಿ ವರ್ತನೆಯಿಂದ ಕೋಪಗೊಂಡ ಆತನಿಗೆ ಶಪಿಸಿದಳು. ತನ್ನನ್ನು ನೋಡದ ಶನಿಯು ಯಾರನ್ನು ನೇರವಾಗಿ ನೋಡುತ್ತಾನೋ ಅವನು ನಾಶವಾಗುತ್ತಾನೆ ಎಂದು ಆಕೆ ಶಪಿಸಿದಳು.
