ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟ ಸಲ್ಮಾನ್ ಖಾನ್ ಸಹೋದರ, ಮಲೈಕಾ ಅರೋರಾ ಮಾಜಿ ಪತಿ ಅರ್ಬಾಜ್ ಖಾನ್ ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂಬೈನಲ್ಲಿ ಕುಟುಂಬದವರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಜೋಡಿ ಸಿಂಪಲ್ ಆಗಿ ಮದುವೆ ಮಾಡಿಕೊಂಡಿದೆ.
ಅರ್ಬಾಜ್ ಹಾಗೂ ಮಲೈಕಾ ಪುತ್ರ ಅರ್ಹಾನ್ ನವ ದಂಪತಿಗೆ ಶುಭಕೋರಿದ್ದಾರೆ. ರವೀನಾ ಟಂಡನ್ ಮೇಕಪ್ ಆರ್ಟಿಸ್ಟ್ ಆದ ಶುರಾರನ್ನು ಅರ್ಬಾಜ್ ಪ್ರೀತಿಸಿ ಮದುವೆಯಾಗಿದ್ದಾರೆ.
ಸದ್ಯ ಅರ್ಬಾಜ್ ಪಾಟ್ನಾ ಶುಕ್ಲಾ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದು, ಇದೇ ಸಿನಿಮಾದಲ್ಲಿ ರವೀನಾ ಕೂಡ ನಟಿಸುತ್ತಿದ್ದಾರೆ. ಸೆಟ್‌ನಲ್ಲಿ ಶುರಾ ಹಾಗೂ ಅರ್ಬಾಜ್ ನಡುವೆ ಪ್ರೀತಿ ಮೂಡಿತ್ತು ಎನ್ನಲಾಗಿದೆ.
ಕೆಲ ವರ್ಷಗಳ ಹಿಂದಷ್ಟೇ ಅರ್ಬಾಜ್ ಹಾಗೂ ಮಲೈಕಾ ಡಿವೋರ್ಸ್ ಪಡೆದಿದ್ದರು. ಇದಾದ ನಂತರ ಮಲೈಕಾ ರೂಪದರ್ಶಿ ಜಾರ್ಜಿಯಾ ಜತೆ ಡೇಟಿಂಗ್‌ನಲ್ಲಿದ್ದರು. ಇತ್ತ ಮಲೈಕಾ ಕೂಡ ಅರ್ಜುನ್ ಕಪೂರ್ ಜೊತೆ ಡೇಟಿಂಗ್‌ನಲ್ಲಿದ್ದಾರೆ.