CINE | ಶೂಟ್‌ಗಾಗಿ ಒಡಿಶಾಗೆ ತೆರಳಿದ ಮಹೇಶ್‌ಬಾಬು-ಪ್ರಿಯಾಂಕಾ ಚೋಪ್ರಾ, ಯಾವ ಸಿನಿಮಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ಅವರು ‘SSMB29’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರವನ್ನು ರಾಜಮೌಳಿ ನಿರ್ದೇಶನ ಮಾಡುತ್ತಿದ್ದಾರೆ.

ಈ ಚಿತ್ರದ ಅಧಿಕೃತ ಘೋಷಣೆ ಇನ್ನೂ ಆಗದೇ ಇದ್ದರೂ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಈ ಚಿತ್ರದ ಮೊದಲ ಹಂತದ ಶೂಟ್ ಹೈದರಾಬಾದ್​ನಲ್ಲೇ ನಡೆದಿದೆ. ಎರಡನೇ ಹಂತದ ಶೂಟ್​ಗಾಗಿ ಇಡೀ ತಂಡ ಒಡಿಶಾಗೆ ತೆರಳಿದೆ. ಪ್ರಮುಖ ದೃಶ್ಯಗಳ ಶೂಟ್ ಇಲ್ಲಿ ನಡೆಯಲಿದೆ ಎಂದು ವರದಿ ಆಗಿದೆ.

ರಾಜಮೌಳಿ ಅವರು ಪ್ರತಿ ಸಿನಿಮಾ ಮಾಡುವ ಮೊದಲು ಅಧಿಕೃತ ಘೋಷಣೆ ಮಾಡುತ್ತಾರೆ. ಆದರೆ, ಈ ಬಾರಿ ಅವರು ಯಾವುದೇ ಮಾಹಿತಿ ನೀಡದೇ ಶೂಟ್ ಆರಂಭಿಸಿದ್ದಾರೆ. ಹೈದರಾಬಾದ್​ನ ಅಲ್ಯೂಮಿನಿಯಂ ಫ್ಯಾಕ್ಟರಿಯಲ್ಲಿ ಮೊದಲ ಹಂತದ ಶೂಟ್ ಮಾಡಿದ್ದ ಅವರು, ಈಗ ಒಡಿಶಾದಲ್ಲಿ ಶೂಟ್ ಮಾಡೋಕೆ ರೆಡಿ ಆಗಿದ್ದಾರೆ.

ಒಡಿಶಾದ ಕೊರಾಪುಟ್ ಎಂಬಲ್ಲಿ ಮುಂದಿನ 12 ದಿನ ಚಿತ್ರೀಕರಣ ನಡೆಯಲಿದೆ. ಮಹೇಶ್ ಬಾಬು ಹಾಗೂ ಪ್ರಿಯಾಂಕಾ ಚೋಪ್ರಾ ಶೂಟ್​ನಲ್ಲಿ ಭಾಗಿ ಆಗಲಿದ್ದಾರೆ. ಇವೆಲ್ಲವೂ ಪ್ರಮುಖ ದೃಶ್ಯಗಳೇ ಆಗಿವೆ ಎನ್ನಲಾಗಿದೆ. ಹಾಲಿವುಡ್​ನಲ್ಲಿ ಸೆಟಲ್ ಆಗಿರೋ ಪ್ರಿಯಾಂಕಾ ಚೋಪ್ರಾ, ಈ ಸಿನಿಮಾದ ಶೂಟ್​ಗಾಗಿ ಭಾರತಕ್ಕೆ ಕಾಲಿಟ್ಟಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!