ಹೊಸದಿಗಂತ ಡಿಜಿಟಲ್ ಡೆಸ್ಕ್:
ಜೆಡಿಎಸ್ ಅಭ್ಯರ್ಥಿ ಎಚ್ಡಿ ಕುಮಾರಸ್ವಾಮಿ ಪರವಾಗಿ ಪ್ರಚಾರ ಮಾಡದೇ ಇರೋದಕ್ಕೂ ಕಾರಣಗಳಿವೆ. ಅವರ ಹಾಗೂ ಪಕ್ಷದ ವರ್ತನೆ ಬೇಸರ ತಂದಿದೆ ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.
ಜಿಡಿಎಸ್ ನಾಯಕರು ತನ್ನನ್ನು ದೂರವಿಟ್ಟರು. ಅವರು ನಡೆಸಿದ ಸಭೆಗೆ ನನ್ನನ್ನು ಕರೆಯಲಿಲ್ಲ, ನಾನಿಲ್ಲದೆಯೂ ಚುನಾವಣೆ ಗೆಲ್ಲುತ್ತೇವೆ ಎನ್ನುವ ಮಾತುಗಳು ನನ್ನ ಕಿವಿಗೆ ಬಿದ್ದಿದೆ. ಅವರ ವರ್ತನೆ ಮತ್ತು ಧೋರಣಗಳಿಂದ ತುಂಬಾ ಬೇಸರವಾಗಿದೆ ಎಂದು ಹೇಳಿದರು.
ನಾನು ಸ್ಪರ್ಧೆ ಮಾಡೋದಿಲ್ಲ ಎಂದಾಗ ನನ್ನ ಬೆಂಬಲಿಗರಿಗೆ ಬೇಸರವಾಗಿತ್ತು, ಜೆಡಿಎಸ್ ವರ್ತನೆ ಕಂಡು ಅವರು ಸ್ಪರ್ಧಿಸಿ ಎಂದು ನೂರು ಬಾರಿ ಹೇಳಿದ್ದರು. ಆದರೆ ಯಾವಾಗಲೂ ಬಿಗ್ಗರ್ ಪಿಕ್ಚರ್ ಬಗ್ಗೆ ಗಮನ ಇರಬೇಕು, ಪ್ರಧಾನಿ ಮೋದಿ ಗೆಲುವು ಸಾಧಿಸಬೇಕು ಎಂದು ಹೇಳುತ್ತಿದ್ದೆ. ಈಗಲೂ ಜನರ ಮಾತು ಕೇಳದೆ ತಪ್ಪು ಮಾಡಿದೆನಾ ಎನಿಸುತ್ತದೆ.
ನಾನು ಮಾಡಿದ ತ್ಯಾಗಕ್ಕೆ ಏನೂ ಬೆಲೆಯಿಲ್ಲದಂತಾಗಿದೆ, ಕುಮಾರಸ್ವಾಮಿಯವರು ಮನೆಗೆ ಬಂದು ಹೋದ ಮೇಲೆ ಒಂದೇ ಒಂದು ಸಲ ತನಗೆ ಫೋನ್ ಮಾಡಿಲ್ಲ ಎಂದು ಸುಮಲತಾ ಬೇಸರದಿಂದ ಹೇಳಿದರು.

 
                                    
ಏನು ತ್ಯಾಗ ಮಾಡಿದ್ದಾರೆ? ಲೋಕಸಭಾ ಸದಸ್ಯತ್ವದ ಅವಧಿ ಮುಗಿದಿತ್ತು. ಕೊನೇ ತನಕ ನೀವು ನಂಬಿದ್ದ ಪಕ್ಷದಲ್ಲಿ ಟಿಕೇಟ್ ಪಡೆಯಲು ಹರ ಸಾಹಸ ಮಾಡಿ ವಿಫಲರಾದ ಮೇಲೆ ಅನಿವಾರ್ಯವಾಗಿ ಚುನಾವಣೆಗೆ ಸ್ಪರ್ಧಿಸಿಲ್ಲ,ಒಂದುವೇಳೆ ಟಿಕೇಟ್ ದೊರೆತಿದ್ದರೆ ತ್ಯಾಗ ಮಾಡ್ತಾಇದ್ದರಾ? ಅಥವಾ ಪಕ್ಷೇತರರಾಗಿ ಗೆದ್ದೇಗೆಲ್ಲುವ ತುಂಬು ಭರವಸೆ ಇದ್ದಿದ್ದರೆ ನೀವು ಚುನಾವಣೆಗೆ ನಿಲ್ಲುತ್ತಿರಲಿಲ್ಲವೆ? ಯಾರೂ ಯಾವ ತಪ್ಪನ್ನೂ ಮಾಡಿಲ್ಲ. ಸಂದರ್ಭಾನುಸಾರ ಸರಿಯಾಗಿಯೇ ನಡೆದುಕೊಂಡಿರುವಿರಿ. ಜೇಡಿಎಸ್,ಕಾಂಗ್ರೆಸ್ ನವರೂ ಕೂಡ ಸಂದರ್ಭಕ್ಕೆ ಅನುಗುಣವಾಗಿ ನಡೆದಿದ್ದಾರೆ. ಅಷ್ಟೆ.