ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹುಭಾಷಾ ನಟಿ ಶ್ರೀಯಾ ಸರಣ್ ತಮ್ಮ ಪ್ರೆಗ್ನೆನ್ಸಿ ಬಗ್ಗೆ ಜಗತ್ತಿಗೆ ಹೇಳಿಯೇ ಇರಲಿಲ್ಲ, ಮಗಳು ಹುಟ್ಟಿದ ನಂತರ ಜಗತ್ತಿಗೆ ಮಗಳನ್ನು ಪರಿಚಯ ಮಾಡಿಕೊಟ್ಟಿದ್ದರು. ಈ ಬಗ್ಗೆ ಶ್ರೀಯಾ ಮಾತನಾಡಿದ್ದು, ಕೆಲಸ ಸಿಗೋದಿಲ್ಲ ಅನ್ನೋ ಭಯಕ್ಕೆ ಪ್ರೆಗ್ನೆನ್ಸಿ ವಿಷಯ ಮುಚ್ಚಿಟ್ಟೆ ಎಂದು ಹೇಳಿಕೊಂಡಿದ್ದಾರೆ.
ಸುದ್ದಿಗೆ ಬಂದ್ರೆ ಜನ ನಮ್ಮ ಬಗ್ಗೆ ಮಾತನಾಡುತ್ತಾರೆ, ಆದರೆ ಇದು ನನ್ನ ಜೀವನಕ್ಕೆ ನೆಗೆಟಿವ್ ಇಂಪ್ಯಾಕ್ಟ್ ಆಗುತ್ತದೆ. ಮಗಳು ರಾಧಾ ಜತೆ ಸಮಯ ಕಳೆಯೋಕೆ ಒತ್ತಡ ಸೃಷ್ಟಿಯಾಗುತ್ತದೆ. ಇನ್ನು ಸಿನಿಮಾಗಳಲ್ಲಿ ಹೀರೋಯಿನ್ ಹೀಗೆ ಇರಬೇಕು ಎಂಬ ನಿರೀಕ್ಷೆ ಇದೆ. ಪ್ರೆಗ್ನೆಂಟ್ ಎಂದು ಗೊತ್ತಾದ ತಕ್ಷಣ ಕೆಲಸದ ಆಪ್ಷನ್ ಕಡಿಮೆ ಆಗುತ್ತದೆ ಎನ್ನುವ ಭಯ ಇತ್ತು. ಟೈಮ್ ತಗೊಂಡು ಸಣ್ಣ ಆದೆ, ತೂಕ ಇಳಿಸಿದೆ. ಸಿನಿಮಾ ಆಫರ‍್ಸ್ ಇದ್ದೇ ಇದೆ ಎಂದು ಶ್ರೀಯಾ ಹೇಳಿಕೊಂಡಿದ್ದಾರೆ.