ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೇಷ
ಉದ್ಯೋಗದಲ್ಲಿ ಹೆಚ್ಚು ಹೊಣೆಗಾರಿಕೆ. ಗಮನ ಬೇರೆಡೆಗೆ ಹರಿಸದಿರಿ. ಕರ್ತವ್ಯ ಮೊದಲು ಮುಗಿಸಿ. ಕುಟುಂಬದ ಕಡೆಗೆ ಗಮನ ಹರಿಸಲು ಸಮಯವಿರದು.
ವೃಷಭ
ಆರೋಗ್ಯಕ್ಕೆ ಸಂಬಂಧಿಸಿ ಚಿಂತೆ ಮೂಡಿದರೂ ಬಳಿಕ ಎಲ್ಲವೂ ನಿರಾಳ. ಆತಂಕ ನಿವಾರಣೆ. ಆಪ್ತೇಷ್ಟರ ಜತೆ ಕಾಲ ಕಳೆಯುವ ಅವಕಾಶ ದೊರೆಯುವುದು.
ಮಿಥುನ
ಭಾವನಾತ್ಮಕ ಪ್ರಸಂಗಕ್ಕೆ ಸಾಕ್ಷಿಯಾಗುವಿರಿ. ಮನಸ್ಸಿಗೆ ನೋವು ತರುವ ಬೆಳವಣಿಗೆ. ಇದು ನಿಮ್ಮ ವೃತ್ತಿ ಕಾರ್ಯದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಿ.
ಕಟಕ
ನೀವಿಂದು ತೆಗೆದುಕೊಳ್ಳುವ  ನಿರ್ಧಾರವು ಭವಿಷ್ಯದಲ್ಲಿ ಮಹತ್ತರ ಪರಿಣಾಮ ಬೀರಬಹುದು. ಹಾಗಾಗಿ ವಿವೇಚಿಸಿ ನಿರ್ಧಾರ ತಾಳಿ. ಆತುರ ಬೇಡ.
ಸಿಂಹ
ಖಾಸಗಿ ಬದುಕಿಗೆ ಗಮನ ಹರಿಸದಷ್ಟು ವೃತ್ತಿಕಾರ್ಯದಲ್ಲಿ ಮುಳುಗುತ್ತೀರಿ. ಬಂಧುಗಳ ಜತೆ ಸಂಬಂಧದಲ್ಲಿ ಇರಿಸುಮುರಿಸು.
ಕನ್ಯಾ
ವೈಯಕ್ತಿಕ ಕಾರ್ಯದಲ್ಲಿ ಸಫಲತೆ. ಆರ್ಥಿಕ ಸ್ಥಿತಿ ಉತ್ತಮಗೊಳಿಸುವ ಉದ್ದೇಶ ಈಡೇರಿಕೆ. ಆದರೆ ಭಾವನಾತ್ಮಕವಾಗಿ ನಿಮಗೆ ನೋವು ಉಂಟಾದೀತು.
ತುಲಾ
ವೃತ್ತಿಗೆ ಸಂಬಂಧಿಸಿದ ಒತ್ತಡವು ಕುಟುಂಬದ ಮೇಲೂ ಪರಿಣಾಮ ಬೀರಬಹುದು. ಇದರಿಂದ ಮಾನಸಿಕ ನೆಮ್ಮದಿ ದೂರ. ಧಾರ್ಮಿಕ ಕಾರ್ಯ.
ವೃಶ್ಚಿಕ
ವೃತ್ತಿಯಲ್ಲಿ ಉತ್ತಮ ನಿರ್ವಹಣೆ. ಕಾರ್ಯ ಸಿದ್ಧಿ. ಅದನ್ನೆ ಕೌಟುಂಬಿಕ ವಿಚಾರದಲ್ಲಿ ಹೇಳಲಾಗದು. ಇಲ್ಲಿ ನಿಮ್ಮ ಕಾರ್ಯಗಳು  ವಿಫಲಗೊಳ್ಳುವವು.
ಧನು
ಆರೋಗ್ಯಕ್ಕೆ ಸಂಬಂಧಿಸಿದ ವಿಚಾರವು ಇಂದು ಆದ್ಯತೆ ಪಡೆಯುವುದು. ಖಾಸಗಿ ಬದುಕಿನಲ್ಲಿ ಎಲ್ಲವೂ ಸುಗಮ. ಅಡ್ಡಿಗಳ ನಿವಾರಣೆ.
ಮಕರ
ಇತರರ ಮೇಲೆ ನಿಮ್ಮ  ಪ್ರಭಾವ ತೋರಲು ಹೋಗುವುದರಿಂದ ಕಾರ್ಯಸಿದ್ಧಿಯಾಗದು. ಅವರ ಮನಸ್ತಾಪ ಕಟ್ಟಿಕೊಳ್ಳುವಿರಿ. ನೆಮ್ಮದಿ ದೂರವಾಗುವುದು.
ಕುಂಭ
ನಿಮ್ಮ ನಡೆನುಡಿಯ  ಮೂಲಕ ಎಲ್ಲರ ಮೆಚ್ಚುಗೆ ಗಳಿಸುವಿರಿ. ಆರ್ಥಿಕ ಒತ್ತಡ ಕಡಿಮೆ. ಆಪ್ತರೊಬ್ಬರು ನಿಮ್ಮ ಭಾವನೆಗೆ ಪೂರಕವಾಗಿ ಸ್ಪಂದಿಸುತ್ತಾರೆ.
ಮೀನ
ಅದೃಷ್ಟವು ಇಂದು ನಿಮ್ಮನ್ನು  ಹಿಂಬಾಲಿಸುತ್ತದೆ.  ಶುಭ ಸುದ್ದಿ ಕೇಳುವಿರಿ. ಪ್ರೀತಿಯ ಭಾವನೆ ವ್ಯಕ್ತಪಡಿಸಲು ಹಿಂಜರಿಯದಿರಿ.
