ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ, ಕೇಸ್ ಇತ್ಯರ್ಥವಾಗುವವರೆಗೂ ತೆಲುಗು ಕಲಾವಿದರ ಸಂಘದಿಂದ ಹೇಮಾರನ್ನು ಅಮಾನತು ಮಾಡಲಾಗಿದೆ.
ತೆಲುಗು ನಟಿ ಹೇಮಾ ಇದೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ಬೆನ್ನಲ್ಲೇ ಮತ್ತೊಂದು ಸಂಕಷ್ಟ ನಟಿಗೆ ಎದುರಾಗಿದೆ. ಕೇಸ್ ಇತ್ಯರ್ಥ ಆಗೋತನಕ ತೆಲುಗು ಕಲಾವಿದರ ಸಂಘದಿಂದ ಹೇಮಾರನ್ನು ಅಮಾನತು ಮಾಡಲಾಗಿದೆ.
ಬೆಂಗಳೂರಿನ ರೇವ್ ಪಾರ್ಟಿ ವಿಚಾರ ಬೆಳಕಿಗೆ ಬಂದ ದಿನದಿಂದ ತಾವು ಹೈದರಾಬಾದ್ನಲ್ಲಿರೋದಾಗಿ ವಿಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದರು. ಈ ವೇಳೆ ತೆಲುಗು ಕಲಾವಿದರ ಸಂಘದ ಅಧ್ಯಕ್ಷ ನಟ ಕಮ್ ನಿರ್ಮಾಪಕ ಮಂಚು ವಿಷ್ಣು ಹೇಮಾ ಪರ ಮಾತನಾಡಿದ್ದರು. ಇದೀಗ ಜೂನ್ 14ರವರೆಗೆ ನಟಿಯನ್ನು ನ್ಯಾಯಾಂಗ ಬಂಧನಕ್ಕೆ ನ್ಯಾಯಾಲಯವು ಒಪ್ಪಿಸಿದ ಬೆನ್ನಲ್ಲೇ ಇದೀಗ ರೇವ್ ಪಾರ್ಟಿ ಪ್ರಕರಣ ಇತ್ಯರ್ಥ ಆಗೋತನಕ ತೆಲುಗು ಕಲಾವಿದರ ಸಂಘದಿಂದ ಹೇಮಾರನ್ನು ಅಮಾನತು ಮಾಡಲಾಗಿದೆ.
