ಸುತ್ತಮುತ್ತ ಹೆಚ್ಚೆಚ್ಚು ಹೃದಯಾಘಾತದ ಸುದ್ದಿಗಳು ಕೇಳಬರುತ್ತಿದ್ದು, ಜನರಲ್ಲಿ ಆತಂಕ ಹೆಚ್ಚಾಗಿದೆ. ಹೃದಯದ ಆರೋಗ್ಯ ಚೆನ್ನಾಗಿಟ್ಟುಕೊಳ್ಳಲು ವ್ಯಾಯಾಮ ಮಾಡಿ, ಇನ್ನು ಉತ್ತಮ ಫ್ಯಾಟ್ ಸೇವಿಸಿ. ದೇಹದ ಕೆಟ್ಟ ಫ್ಯಾಟ್ ಹೋಗಿಸಲು ಈ ಆಹಾರವನ್ನು ಸೇವನೆ ಮಾಡಿ
ವಾಲ್ನಟ್ಸ್ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತದೆ. ಪ್ರತಿದಿನ ಉಪಹಾರದೊಂದಿಗೆ ಕೆಲವು ವಾಲ್ನಟ್ಸ್ ತಿನ್ನುವುದು ದೇಹದಲ್ಲಿನ ಹೆಚ್ಚುವರಿ ಕೊಬ್ಬನ್ನು ಕಡಿಮೆ ಮಾಡುತ್ತದೆ.
ಬಾದಾಮಿ ಹಾಗೂ ಶೇಂಗಾ ನಿಯಮಿತವಾಗಿ ತಿನ್ನುವುದರಿಂದ ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು. ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ.
ಆಲಿವ್ ಎಣ್ಣೆ ಆರೋಗ್ಯಕ್ಕೆ ಮಾತ್ರವಲ್ಲದೆ ಹೃದಯಕ್ಕೂ ಒಳ್ಳೆಯದು. ಈ ಎಣ್ಣೆಯು ಉತ್ತಮ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ.
ಈ ಸಣ್ಣ ಬೀಜಗಳು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ. ಇವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತವೆ.
ಬೆಳಗ್ಗೆ ಎದ್ದ ತಕ್ಷಣ ವಿಟಮಿನ್- ಸಿಯಲ್ಲಿ ಸಮೃದ್ಧವಾಗಿರುವ ಒಂದು ಲೋಟ ಕಿತ್ತಳೆ ರಸ ಕುಡಿಯುವುದರಿಂದ ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಬಹುದು