ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹು ಬೇಡಿಕೆಯ ನಟಿ ನಯನತಾರಾ (Nayanthara) ಅವರು ತಮಗೆ ಉಂಟಾದ ಕಹಿ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ.
ಅವರಿಗೂ ಕಾಸ್ಟಿಂಗ್ ಕೌಚ್ (Casting Couch) ಅನುಭವ ಆಗಿತ್ತು. ಇತ್ತೀಚೆಗೆ ಮಾಧ್ಯಮದವರ ಜತೆ ಮಾತನಾಡುತ್ತಾ ನಯನತಾರಾ ಈ ವಿಚಾರವನ್ನು ಹೇಳಿದ್ದಾರೆ.
ಮಲಯಾಳಂ ಚಿತ್ರರಂಗದಲ್ಲಿ ನಟಿಸುವ ಮೂಲಕ ಬಣ್ಣದ ಬದುಕು ಆರಂಭಿಸಿದ ನಯನತಾರಾ ಬಳಿಕ ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸೋಕೆ ಅವಕಾಶ ಸಿಕ್ಕಿತು.
ಹೀಗೆ ಮಾತನಾಡುತ್ತ ಜೀವನದಲ್ಲಿ ಉಂಟಾದ ಕಹಿ ಅನುಭವವನ್ನು ಹೇಳಿದ್ದಾರೆ. ‘ಸಿನಿಮಾ ರಂಗಕ್ಕೆ ನಾನು ಕಾಲಿಟ್ಟ ಆರಂಭದಲ್ಲಿ ಕಾಸ್ಟಿಂಗ್ಕೌಚ್ ಅನುಭವ ಎದುರಿಸಿದ್ದೆ. ಸಿನಿಮಾ ಆಫರ್ ಕೊಡ್ತೀವಿ ಪ್ರತಿಯಾಗಿ ಕಮಿಟ್ಮೆಂಟ್ ಕೊಡುವಂತೆ ಅವರು ಕೇಳಿದ್ದರು. ಆದರೆ, ನಾನು ಅದನ್ನು ತಿರಸ್ಕರಿಸಿ ಬಂದೆ. ನನ್ನ ನಟನೆಯ ಮೇಲೆ ನನಗೆ ನಂಬಿಕೆ ಇತ್ತು’ ಎಂದಿದ್ದಾರೆ ನಯನತಾರಾ.
2022 ಅವರ ಪಾಲಿಗೆ ವಿಶೇಷ ಆಗಿತ್ತು. ಪ್ರಿಯಕರ ವಿಘ್ನೇಶ್ ಶಿವನ್ ಜತೆ ಅವರು ಮದುವೆ ಆದರು. ಬಾಡಿಗೆ ತಾಯ್ತನದ ಮೂಲಕ ಅವಳಿ ಮಗು ಪಡೆದರು.
ಈಗ ನಯನತಾರಾ ‘ಜವಾನ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಶಾರುಖ್ ಖಾನ್ ನಟನೆಯ ಈ ಚಿತ್ರಕ್ಕೆ ಅಟ್ಲಿ ಅವರು ನಿರ್ದೇಶನ ಮಾಡುತ್ತಿದ್ದಾರೆ.