ಸಂಜೆ ಆಗ್ತಿದ್ದಂತೆ ಬಿಸಿ ಬಿಸಿಯಾದ ತಿಂಡಿಯನ್ನು ಸವಿಯುವ ಆಸೆ ಎಲ್ಲರಲ್ಲಿಯೂ ಇರುತ್ತದೆ. ಇಂತಹ ಸಮಯದಲ್ಲಿ ರುಚಿ ಮತ್ತು ಆರೋಗ್ಯ ಎರಡನ್ನೂ ಒಟ್ಟಿಗೆ ನೀಡುವ ಬಾಳೆಕಾಯಿ ಸಮೋಸ ಒಂದು ಉತ್ತಮ ಆಯ್ಕೆ. ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಈ ತಿಂಡಿಗೆ ಬೇಕಾಗುವ ಸಾಮಗ್ರಿಗಳು ಮತ್ತು ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿಗಳು:
ಗೋಧಿಹಿಟ್ಟು- 2 ಕಪ್
ಓಂ ಕಾಳು- ಸ್ವಲ್ಪ ಕಾಲು
ರುಚಿಗೆ ತಕ್ಕಷ್ಟು ಉಪ್ಪು
ತುಪ್ಪ- ಅರ್ಧ ಕಪ್
ಬಾಳೆಕಾಯಿ – 4
ಹಸಿರು ಬಟಾಣಿ – ಅರ್ಧ ಕಪ್
ಅಡುಗೆ ಎಣ್ಣೆ – 2 ಕಪ್
ಜೀರಿಗೆ- ಸ್ವಲ್ಪ
ಜೀರಿಗೆ ಪುಡಿ- ಸ್ವಲ್ಪ
ಅರಿಸಿಣ ಪುಡಿ-ಸ್ವಲ್ಪ
ದನಿಯಾ ಪುಡಿ- 1 ಚಮಚ
ಗರಂಮಸಾಲ – ಸ್ವಲ್ಪ
ಖಾರದಪುಡಿ – 1 ಚಮಚ
ಮಾಡುವ ವಿಧಾನ:
ಮೊದಲು ಹಸಿರು ಬಟಾಣಿಯನ್ನು ನೆನೆಸಿ, ನಂತರ ಬಾಳೆಕಾಯಿ ಮತ್ತು ಬಟಾಣಿಯನ್ನು ಕುಕ್ಕರಿನಲ್ಲಿ ಬೇಯಿಸಿಕೊಳ್ಳಿ.
ಈಗ ಗೋಧಿಹಿಟ್ಟಿಗೆ ಓಂ ಕಾಳು, ಉಪ್ಪು ಮತ್ತು ಮೂರು ಚಮಚ ತುಪ್ಪ ಸೇರಿಸಿ, ಚಪಾತಿ ಹಿಟ್ಟಿಗಿಂತ ಗಟ್ಟಿಯಾಗಿ ಕಲಸಿ. ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ, ಬೇಯಿಸಿದ ಬಾಳೆಕಾಯಿ ಮತ್ತು ಬಟಾಣಿಗೆ ಜೀರಿಗೆ, ಅರಿಶಿಣ, ಜೀರಿಗೆ ಪುಡಿ, ದನಿಯಾ ಪುಡಿ, ಗರಂ ಮಸಾಲ ಮತ್ತು ಖಾರದ ಪುಡಿ ಸೇರಿಸಿ ಚೆನ್ನಾಗಿ ಕಲಸಿ ಆಲೂಗಡ್ಡೆಯ ಮಿಶ್ರಣದಂತೆ ಮಾಡಿ.
ನಂತರ ಹಿಟ್ಟನ್ನು ಲಟ್ಟಿಸಿ ತ್ರಿಕೋನಾಕಾರದಂತೆ ಮಡಚಿ ಮಾಡಿಟ್ಟ ಬಾಳೆಕಾಯಿ ಮಸಾಲೆ ತುಂಬಿ ಎಣ್ಣೆಯಲ್ಲಿ ಕರಿದರೆ ಬಿಸಿ ಬಿಸಿ ಬಾಳೆಕಾಯಿ ಸಮೋಸ ಸವಿಯಲು ಸಿದ್ಧ.