ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತದ ಮೊದಲ ಹಂತದ ತನಿಖೆ ಮುಕ್ತಾಯಗೊಂಡಿದ್ದು, 1935 ರಿಂದ 2010ರ ವರೆಗಿನ ಎಲ್ಲಾ ದಾಖಲೆಗಳನ್ನು ಸೀಜ್ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗುರುವಾರ ಲೋಕಾಯುಕ್ತ ತಂಡ ಇಬ್ಬರು ಆರೋಪಿಗಳನ್ನ ಸುದೀರ್ಘ 10 ತಾಸುಗಳ ವಿಚಾರಣೆಗೆ ಒಳಪಡಿಸಿತ್ತು. ಇಬ್ಬರು ಆರೋಪಿಗಳಿಂದ 1935 ರಿಂದ 2010ರ ವರೆಗಿನ ಎಲ್ಲಾ ವ್ಯವಹಾರದ ಬಗ್ಗೆ ಮಾಹಿತಿ ಪಡೆದುಕೊಂಡಿತ್ತು. ಇದೇ ವೇಳೆ ಕೆಸರೆಯಲ್ಲಿ ಸರ್ವೆ ನಂಬರ್ 426ರ ಮೂರುಕಾಲು ಎಕರೆ ಭೂಮಿಯ ವಾರಸುದಾರಿಕೆ ಕುರಿತು ವಿಚಾರಣೆ ನಡೆಸಲಾಗಿತ್ತು.
ವಿಚಾರಣೆ ಸಂದರ್ಭದಲ್ಲಿ ಪ್ರಕರಣದ ಎ4 ಆರೋಪಿ ದೇವರಾಜು ಹಲವು ದಾಖಲೆಗಳನ್ನು ಸಲ್ಲಿಸಿದರು. ನಂತರ ಎ3 ಆರೋಪಿಯಿಂದಲೂ ದಾಖಲೆಗಳನ್ನು ಪಡೆದು ಮಾಹಿತಿ ಕಲೆಹಾಕಿತ್ತು ಲೋಕಾಯುಕ್ತ ಟೀಂ
ಮೊದಲ ಹಂತದ ತನಿಖೆ ಪೂರ್ಣಗೊಳಿಸಿರುವ ಲೋಕಾಯುಕ್ತ ತಂಡ ಅಕ್ಟೋಬರ್ 14ರಿಂದ 2ನೇ ಹಂತದ ತನಿಖೆ ನಡೆಸಲಿದೆ. ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮುಂದಿನ 10 ದಿನಗಳಲ್ಲಿ ನೋಟಿಸ್ ಕೊಡುವ ಸಾಧ್ಯತೆಗಳಿವೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ.

