ಹೊಸದಿಗಂತ ಡಿಜಿಟಲ್ ಡೆಸ್ಕ್
ವಿಶ್ವ ಫುಟ್ಬಾಲ್ ಸಂಸ್ಥೆ ಫಿಫಾ(FIFA) ಜರ್ಮನಿ ತಂಡಕ್ಕೆ10 ಸಾವಿರ ಸ್ವಿಸ್ ಫ್ರಾಂಕ್(ಅಂದಾಜು 8.5 ಲಕ್ಷ ರೂ.) ದಂಡವನ್ನು ವಿಧಿಸಿದೆ.
ಸ್ಪೇನ್ ಜೊತೆಗಿನ ಪಂದ್ಯ ನಡೆಯುವುದಕ್ಕೂ ಮೊದಲು ಸುದ್ದಿಗೋಷ್ಠಿಗೆ ಆಟಗಾರನನ್ನು ಜರ್ಮನಿ ಕಳುಹಿಸಬೇಕಿತ್ತು. ಆದರೆ ಆಟಗಾರನನ್ನು ಕಳುಹಿಸದ ಹಿನ್ನೆಲೆಯಲ್ಲಿ ಫಿಫಾ ಜರ್ಮನಿ ತಂಡಕ್ಕೆ ದಂಡವನ್ನು ವಿಧಿಸಿದೆ.
ತಂಡದ ಕೋಚ್ ಹನ್ಸಿ ಫ್ಲಿಕ್ ಸೂಚನೆಯಂತೆ ಯಾವೊಬ್ಬ ಆಟಗಾರ ಪ್ರೆಸ್ ಮೀಟ್ಗೆ ಹಾಜರಾಗಿರಲಿಲ್ಲ. ಪಂದ್ಯದ ಮೇಲೆ ಗಮನ ನೀಡಲು ಆಟಗಾರನನ್ನು ಕೋಚ್ ಕಳುಹಿಸಿರಲಿಲ್ಲ.
