ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದಲ್ಲಿ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಗುಫ್ರಾನ್ನನ್ನು ಗುಂಡಿಕ್ಕಿ ಕೊಲ್ಲಲಾಗಿದೆ.
ಕೌಶಂಬಿಯಲ್ಲಿ ಇಂದು ಎನ್ಕೌಂಟರ್ ನಡೆಸಿದ್ದು, ಗುಂಡಿಕ್ಕಿ ಪಾತಕಿಯನ್ನು ಹತ್ಯೆ ಮಾಡಲಾಗಿದೆ, ಸಾಕಷ್ಟು ಕೊಲೆ ಹಾಗೂ ರಾಬರಿ ಕೇಸ್ನಲ್ಲಿ ಈತನನ್ನು ಪೊಲೀಸರು ಹುಡುಕುತ್ತಿದ್ದರು.
ಒಟ್ಟಾರೆ 13 ಕೊಲೆ ಮಾಡಿ ರಾಜಾರೋಷವಾಗಿ ಓಡಾಡುತ್ತಿದ್ದ ಗುಫ್ರಾನ್ನನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ. ಈತನನ್ನು ಹುಡುಕಿಕೊಟ್ಟವರಿಗೆ ಒಂದು ಲಕ್ಷ ರೂಪಾಯಿ ಬಹುಮಾನವನ್ನು ಉತ್ತರ ಪ್ರದೇಶ ಪೊಲೀಸರು ಘೋಷಿಸಿದ್ದರು.
