ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುಕೇಶ್ ಚಂದ್ರಶೇಖರ್ ಅವರ ಅಕ್ರಮ ಹಣವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಲಂಕಾ ಮೂಲದ ಬಾಲಿವುಡ್ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಗೆ ಈಗ ಮತ್ತೊಮ್ಮೆ ಇಡಿ ಸಂಕಷ್ಟ ಎದುರಾಗಿದೆ. ಜಾಕ್ವೆಲಿನ್ ಫರ್ನಾಂಡಿಸ್ ವಿರುದ್ಧ ಜಾರಿ ನಿರ್ದೇಶನಾಲಯ ಬುಧವಾರ ಮನಿ ಲಾಂಡರಿಂಗ್ ಆರೋಪಪಟ್ಟಿ ಸಲ್ಲಿಸಿದೆ. ಸುಕೇಶ್ ಚಂದ್ರಶೇಖರ್ ವಿರುದ್ಧ 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ಆರೋಪಪಟ್ಟಿಯಲ್ಲಿ ಜಾಕ್ವೆಲಿನ್ ಅವರನ್ನು ಆರೋಪಿ ಎಂದು ಹೆಸರಿಸಲಾಗಿದೆ.
ಈ ಹಿಂದೆಯೂ ಕೂಡ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಜಾಕ್ವೆಲಿನ್ಗೆ ಹಲವು ಬಾರಿ ಸಮನ್ಸ್ ಜಾರಿಯಾಗಿದೆ. ಜಾಕ್ವೆಲಿನ್ ಫರ್ನಾಂಡಿಸ್ ಅವರು ಆರೋಪಿತ ಸುಕೇಶ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರು ಎನ್ನಲಾಗಿದೆ. ಈ ಕುರಿತು ಸ್ವತಃ ಸುಕೇಶ್ ಅವರ ವಕೀಲರೇ ಒಪ್ಪಿಕೊಂಡಿದ್ದರು ಮತ್ತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದರು. ಆದರೆ ಇದನ್ನು ಜಾಕ್ವೆಲಿನ್ ನಿರಾಕರಿಸಿದ್ದರು. ಅಲ್ಲದೇ ಸುಕೇಶ್ ಅವರು ನೀಡಿದ ಉಡುಗೊರೆಗಳನ್ನು ವಾಪಸ್ ನೀಡಿರುವುದಾಗಿ ಹೇಳಿದ್ದರು.
ಪ್ರಸ್ತುತ ಇಡಿ ಅವರು ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದು ಜಾಕ್ವೆಲಿನ್ ಗೆ ಸಂಕಷ್ಟ ಎದುರಾಗಿದೆ.

