Do You Know | ಆಹಾರದ ಪ್ಯಾಕೆಟ್‌ಗಳ ಮೇಲೆ ಇರುವ ಬಣ್ಣದ ಗುರುತುಗಳ ಅರ್ಥವೇನು? ಇವುಗಳ ಬಗ್ಗೆ ನಿಮಗೆಷ್ಟು ಗೊತ್ತು?

ಇತ್ತೀಚೆಗೆ ಭಾರತದ ಜನರ ಆಹಾರದ ಅಭಿರುಚಿಯಲ್ಲಿ ವ್ಯಾಪಕ ಬದಲಾವಣೆ ಕಂಡುಬಂದಿದೆ. ಮೊದಲು ಮಾಂಸಾಹಾರ ಮತ್ತು ಸಸ್ಯಾಹಾರದ ನಡುವೇ ಇದ್ದರೆ, ಇಂದಿನ ದಿನಗಳಲ್ಲಿ ಹಲವರು ಶುದ್ಧ ಸಸ್ಯಾಹಾರಿ ಹಾಗೂ ವಿಗನ್ ಆಹಾರವನ್ನೇ ಅಳವಡಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಪ್ಯಾಕೆಟ್ ಆಹಾರವನ್ನು ಆಯ್ಕೆಮಾಡುವಾಗ ಬಣ್ಣದ ಗುರುತುಗಳನ್ನು ಗಮನಿಸುವುದು ಆರೋಗ್ಯಕ್ಕಾಗಿ ಬಹಳ ಅಗತ್ಯವಾಗಿದೆ.

ಪ್ರತಿ ಪ್ಯಾಕೆಟ್‌ನಲ್ಲಿ ಸಣ್ಣ ಬಣ್ಣದ ಚಿಹ್ನೆಗಳನ್ನು ನಾವು ನೋಡುತ್ತೇವೆ. ಇದು ಕೇವಲ ವಿನ್ಯಾಸವಲ್ಲ. ಬದಲಾಗಿ ಈ ಗುರುತುಗಳು ಅದರೊಳಗಿನ ಅಂಶಗಳ ಬಗ್ಗೆ ಮುಖ್ಯ ಮಾಹಿತಿ ನೀಡುತ್ತವೆ.

ಹಸಿರು ಚಿಹ್ನೆಯು ಸಂಪೂರ್ಣ ಸಸ್ಯಾಹಾರ ಎಂದು ಸೂಚಿಸುತ್ತದೆ. ಯಾವುದೇ ಪ್ರಾಣಿ ಉತ್ಪನ್ನವಿಲ್ಲದ ಈ ಆಹಾರವನ್ನು ನಿರ್ಭಯವಾಗಿ ಶುದ್ಧ ಸಸ್ಯಾಹಾರಿಗಳು ಬಳಸಬಹುದು.

ಆದರೆ ಕೆಂಪು ಗುರುತು ಇದ್ದರೆ, ಅದು ಮಾಂಸಾಹಾರ ಪದಾರ್ಥಗಳಿದೆ ಎಂದು ಅರ್ಥ.

ಕೆಲವೊಮ್ಮೆ ಮೊಟ್ಟೆ ಇರುವ ಉತ್ಪನ್ನಗಳಿಗೆ ಹಳದಿ ಗುರುತು ಹಾಕಲಾಗುತ್ತದೆ – ಮೊಟ್ಟೆ ತಿನ್ನದವರು ಇದರ ಬಗ್ಗೆ ಎಚ್ಚರವಾಗಿರಬೇಕು.

ಅದೇ ರೀತಿ ನೀಲಿ ಬಣ್ಣದ ಗುರುತುಗಳು ಔಷಧೀಯ ಉತ್ಪನ್ನಗಳನ್ನು ಸೂಚಿಸುತ್ತವೆ. ವೈದ್ಯಕೀಯ ಸಲಹೆ ಇಲ್ಲದೆ ಈ ಪ್ಯಾಕೆಟ್‌ಗಳೊಳಗಿನ ಆಹಾರವನ್ನು ಸೇವಿಸುವುದು ಸೂಕ್ತವಲ್ಲ.

ಆದರೆ ಹೆಚ್ಚು ಅಪಾಯಕಾರಿ ಎಂದರೆ ಕಪ್ಪು ಗುರುತು. ಈ ಗುರುತಿರುವ ಉತ್ಪನ್ನಗಳಲ್ಲಿ ಅತಿಯಾಗಿ ಸಂರಕ್ಷಣಾ ರಾಸಾಯನಿಕಗಳು, ರುಚಿ, ಬಣ್ಣ ಹಾಗೂ ಘಮವನ್ನು ಹೆಚ್ಚಿಸುವ ದ್ರವ್ಯಗಳು ಸೇರಿರುತ್ತವೆ. ಇವು ದೀರ್ಘಕಾಲ ಸೇವನೆಯಿಂದ ಅನೇಕ ಆರೋಗ್ಯ ತೊಂದರೆಗಳಿಗೆ ಕಾರಣವಾಗಬಹುದು.

ಆದ್ದರಿಂದ ಪ್ರತಿಯೊಬ್ಬ ಗ್ರಾಹಕರೂ ತಮ್ಮ ಆರೋಗ್ಯದ ಸುರಕ್ಷತೆಗೆ ಈ ಬಣ್ಣದ ಗುರುತುಗಳ ಅರಿವಿರಬೇಕು. ವಿಶೇಷವಾಗಿ ಮಕ್ಕಳ ತಿಂಡಿಗಳ ಆಯ್ಕೆಯಲ್ಲಿ ಈ ಮಾಹಿತಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಬಣ್ಣದ ಗುರುತು ನೋಡಿ ಸರಿಯಾದ ಆಹಾರ ಆಯ್ಕೆಮಾಡುವುದು ಈಗ ಅವಶ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!