ಸಣ್ಣ ಗಂಟಲುನೋವಿನಿಂದ ಹಿಡಿದು ಜೀವವೇ ಹೋಗುವಂಥ ಸರ್ಜರಿಗಳಿಗೂ ನಮಗೆ ವೈದ್ಯರೇ ಬೇಕು. ವೈದ್ಯರಿಲ್ಲದ ಜಗತ್ತನ್ನು ಇಮ್ಯಾಜಿನ್ ಮಾಡಿಕೊಳ್ಳೋದು ಕಷ್ಟ. ತಮ್ಮ ಪರ್ಸನಲ್ ಜೀವನ ಮರೆತು ಜನರ ನೋವುಗಳಿಗೆ ಸ್ಪಂದಿಸುವ ವೈದ್ಯರನ್ನು ದೇವರಂತೆ ಕಾಣೊದ್ರಲ್ಲಿ ತಪ್ಪೇ ಇಲ್ಲ.

ವೈದ್ಯರು ನಮಗಾಗಿ ಎಷ್ಟೆಲ್ಲಾ ಮಾಡುತ್ತಾರೆ ಆದರೆ ನಮ್ಮಿಂದ ವೈದ್ಯರಿಗೆ ಏನಾದರೂ ಸಹಾಯ ಬೇಕಾ? ಖಂಡಿತಾ ಬೇಕು.. ನಮ್ಮ ಆರೋಗ್ಯ ಚೆನ್ನಾಗಿದ್ದರೆ ಅದೇ ಅವರಿಗೆ ನಾವು ನೀಡುವ ಕೊಡುಗೆಯಾಗಲಿದೆ. ಯಾವ ವೈದ್ಯರೂ ಹೆಚ್ಚು ಜನರಿಗೆ ರೋಗ ಬರಲಿ, ನಮ್ಮ ಆಸ್ಪತ್ರೆಗೆ ಬರಲಿ ಎಂದು ಅಂದುಕೊಳ್ಳುವುದಿಲ್ಲ. ಬಂದವರನ್ನು ಗುಣಪಡಿಸುತ್ತಾರಷ್ಟೆ. ವೈದ್ಯರಿಗೆ ಈ ರೀತಿ ಸಹಾಯ ಮಾಡಿ..

ನಿಮ್ಮ ಆರೋಗ್ಯ ಚೆನ್ನಾಗಿಯೇ ಇರಲಿ, ಆದರೂ ವರ್ಷಕ್ಕೊಮ್ಮೆ ಫುಲ್ ಬಾಡಿ ಚೆಕಪ್ ಮಾಡಿಸಿ.

ಫೋನ್ ಮಾಡಿ ಅಥವಾ ಮೆಸೇಜ್ ಮಾಡಿ ವೈದ್ಯರ ಬಳಿ ಪ್ರಿಸ್ಕ್ರಿಪ್ಷನ್ ಕೇಳಬೇಡಿ.

ನಿಮ್ಮ ಮೆಡಿಕೇಷನ್ಗಳ ಬಗ್ಗೆ ಗಮನ ಇರಲಿ, ಪದೇ ಪದೆ ಫೋನ್ ಮಾಡಿ ಡೋಸ್ ಕೇಳುವುದು ಸರಿಯಾಗುವುದಿಲ್ಲ.

ಡ್ರಗ್ಸ್, ಡ್ರಿಂಕ್ಸ್, ಸೆಕ್ಸ್, ಸ್ಮೋಕ್ ಯಾವುದೇ ವಿಷಯ ಇರಲಿ. ವೈದ್ಯರ ಬಳಿ ಸುಳ್ಳು ಹೇಳಬೇಡಿ.

ದೇಹದಲ್ಲಿ ಯಾವುದೇ ಬದಲಾವಣೆ ಆಗುತ್ತಿದೆ, ಅದು ಕಿರಿಕಿರಿ ಉಂಟು ಮಾಡುತ್ತಿದೆ ಎನಿಸಿದರೆ ವೈದ್ಯರನ್ನು ಕಡೆಯ ಹಂತದಲ್ಲಿ ಭೇಟಿ ಮಾಡಬೇಡಿ.

ವೈದ್ಯರ ಬಳಿ ಹೋಗಿ ಗೂಗಲ್ನಲ್ಲಿ ನೋಡಿದ್ದೇನೆ ಎಂದು ಅಡ್ವೈಸ್ ನೀಡಬೇಡಿ. ನಿಮ್ಮ ಸಮಸ್ಯೆಯ ಲಕ್ಷಣಗಳನ್ನು ತಪ್ಪಿಲ್ಲದೇ ಹೇಳಿ.

