ಮೋದಿ ಉದ್ಘಾಟಿಸಿದ್ದ ಉಜ್ಜಯಿನಿ ವಿಕ್ರಮಾದಿತ್ಯ ವೇದಿಕ್ ಗಡಿಯಾರದ ಮೇಲೆ ಸೈಬರ್ ದಾಳಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಉಜ್ಜಯಿನಿ ನಗರದಲ್ಲಿರುವ ಪ್ರಾಚೀನ ಭಾರತೀಯ ಪದ್ಧತಿಯ ಕಾಲಮಾನ, ಪಂಚಾಂಗ ಮಾಹಿತಿ ನೀಡುವ ವಿಕ್ರಮಾದಿತ್ಯ ವೇದಿಕ್ ಗಡಿಯಾರದ ಮೇಲೆ ಸೈಬರ್ ದಾಳಿ ನಡೆದಿದೆ!

ಈ ಗಡಿಯಾರವು ಅಸ್ಪಷ್ಟ ಹಾಗೂ ಗೊಂದಲದ ಮಾಹಿತಿ ಬಿತ್ತರಿಸುತ್ತಿರುವುದನ್ನು ಗಮನಿಸಿ ಪರೀಕ್ಷೆಗೊಳಪಡಿಸಿದಾಗ ಈ ಬೆಳವಣಿಗೆ ನಡೆದಿರುವುದು ಸ್ಪಷ್ಟವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಜ್ಜಯಿನಿಯ ಜಂತರ್ ಮಂತರ್‌ನಲ್ಲಿ 85 ಅಡಿ ಎತ್ತರದ ಗೋಪುರದ ಮೇಲೆ ಈ ವಿಕ್ರಮಾದಿತ್ಯ ವೇದಿಕ್ ಗಡಿಯಾರವನ್ನು ಸ್ಥಾಪಿಸಲಾಗಿದ್ದು, ಇದನ್ನು ಫೆ.29ರಂದು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆಗೊಳಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!