ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್‌ನ ಸೆನ್ಸೇಷನಲ್ ರೊಮ್ಯಾಂಟಿಕ್ ಡ್ರಾಮಾ ‘ಸೈಯಾರ’ ಪ್ರೇಕ್ಷಕರ ಮನಗೆದ್ದಿದ್ದು, ವಿಶ್ವ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂಪಾಯಿ ಕ್ಲಬ್‌ಗೆ ಸೇರಿದೆ. ಇಷ್ಟು ದೊಡ್ಡ ಮಟ್ಟದ ಗಳಿಕೆಯನ್ನು ಸಾಧಿಸಿದ ರೊಮ್ಯಾಂಟಿಕ್ ಡ್ರಾಮಾ ಚಿತ್ರ ಇದುವೇ ಮೊದಲು. ಚಿತ್ರದ ನಾಯಕ ಅಹಾನ್ ಪಾಂಡೆ ಹಾಗೂ ನಾಯಕಿ ಅನೀತ್ ಪಡ್ಡ ಈ ಯಶಸ್ಸಿನಿಂದ ರಾತ್ರೋರಾತ್ರಿ ಸ್ಟಾರ್ ಆಗಿದ್ದಾರೆ.
ಆದರೆ, ಸಿನಿಮಾ ಯಶಸ್ಸಿನ ನಡುವೆ ಕೃತಿ ಚೌರ್ಯದ ಆರೋಪವೂ ಕೇಳಿಬಂದಿದೆ. ‘ಸೈಯಾರ’ ಕೊರಿಯಾ ಚಿತ್ರದಾದ ‘ಎ ಮೂಮೆಂಟ್ ಟು ರಿಮೆಂಬರ್’ ರಿಮೇಕ್ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಕೆಲವು ದೃಶ್ಯಗಳು ಹೋಲಿಕೆ ಕಂಡುಬಂದ ಕಾರಣ ಈ ಆರೋಪ ಬಲವಾಗಿದೆ. ಈ ಬಗ್ಗೆ ಚಿತ್ರದ ಬರಹಗಾರ ಸಂಕಲ್ಪ್ ಸ್ಪಷ್ಟನೆ ನೀಡಿದ್ದು, “ಎರಡೂ ಸಿನಿಮಾಗಳು ಪ್ರೇಕ್ಷಕರಿಗೆ ಲಭ್ಯವಿದೆ. ನೋಡಿ ತೀರ್ಮಾನಿಸಿ – ಇದು ಪ್ರೇರಣೆ ಪಡೆದ ಕಥೆಯೋ, ಕೃತಿ ಚೌರ್ಯವೋ ಅಥವಾ ಸಂಪೂರ್ಣ ಮೂಲ ಕಥೆಯೋ ಎಂದು. ನಿರ್ದೇಶಕ ಮೋಹಿತ್ ಸೂರಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಹುಟ್ಟಿದ ಕಥೆ ಇದು” ಎಂದಿದ್ದಾರೆ.
ಕೆಲವರು ಈ ಚಿತ್ರವನ್ನು ‘ಆಶಿಕಿ 2’ ಚಿತ್ರದ ಸೀಕ್ವೆಲ್‌ನಂತೆ ಭಾವಿಸಿದ್ದರು. ಆದರೆ ಸಂಕಲ್ಪ್ ಈ ಅಭಿಪ್ರಾಯವನ್ನು ತಳ್ಳಿ ಹಾಕಿದ್ದಾರೆ.
ಬಾಕ್ಸ್ ಆಫೀಸ್ ವರದಿಗಳ ಪ್ರಕಾರ, ‘ಸೈಯಾರ’ ಭಾರತದಲ್ಲೇ 310 ಕೋಟಿ ರೂಪಾಯಿ ಗಳಿಕೆ ಮಾಡಿದ್ದು, 22ನೇ ದಿನ 1.65 ಕೋಟಿ ರೂಪಾಯಿ ಕಲೆಕ್ಷನ್ ದಾಖಲಿಸಿದೆ. ಜಾಗತಿಕ ಮಟ್ಟದಲ್ಲಿ ಈ ಚಿತ್ರ ಈಗಾಗಲೇ 500 ಕೋಟಿ ರೂಪಾಯಿಯ ಸಂಗ್ರಹ ಸಾಧನೆ ಮಾಡಿದೆ.