Children’s Health | ನಿಮ್ಮ ಮಕ್ಕಳು ಇಡೀ ದಿನ ಕುಳಿತುಕೊಂಡಿದ್ರೆ ಈ ಸಮಸ್ಯೆ ಬರೋದು ಖಂಡಿತ!

ಇಂದಿನ ಪೀಳಿಗೆಯ ಮಕ್ಕಳು ಹೆಚ್ಚು ಸಮಯವನ್ನು ಪುಸ್ತಕ, ತರಗತಿ, ಕೋಚಿಂಗ್ ಸೆಂಟರ್ ಮತ್ತು ಮೊಬೈಲ್ ಸ್ಕ್ರೀನ್‌ಗಳ ಮುಂದೆ ಕಳೆಯುತ್ತಿದ್ದಾರೆ. ಹೊರಗೆ ಆಡುವುದು, ಸೂರ್ಯನ ಬೆಳಕಿಗೆ ತಾವು ಒಡ್ಡಿಕೊಳ್ಳುವುದು, ಸ್ನೇಹಿತರ ಜೊತೆ ಚಟುವಟಿಕೆ ನಡೆಸುವುದು ಇವೆಲ್ಲವೂ ನಿಧಾನವಾಗಿ ಕಡಿಮೆಯಾಗುತ್ತಿದೆ. ಸ್ಪರ್ಧಾತ್ಮಕ ಶಿಕ್ಷಣ ವ್ಯವಸ್ಥೆಯ ಒತ್ತಡ, ಅಂಕಗಳ ಹಿಂದೆ ನಡೆಯುತ್ತಿರುವ ಓಟ ಮತ್ತು ತಂತ್ರಜ್ಞಾನ ಬಳಕೆಯ ಅತಿಯಾಗಿ, ಮಕ್ಕಳ ದೈಹಿಕ-ಮಾನಸಿಕ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಈ ಬದಲಾವಣೆಯಿಂದಾಗಿ ಅವರ ಆರೋಗ್ಯ ಸಮಸ್ಯೆಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ.

ಮಕ್ಕಳಲ್ಲಿ ಆಟ, ವ್ಯಾಯಾಮ ಮತ್ತು ವಿಶ್ರಾಂತಿ ಕೊರತೆ ಇದ್ದರೆ ಅವರು ಶಾರೀರಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ದುರ್ಬಲರಾಗುತ್ತಾರೆ. ದೀರ್ಘಕಾಲ ಒಂದೇ ಕಡೆ ಕುಳಿತುಕೊಳ್ಳುವುದು ಸ್ನಾಯು ದುರ್ಬಲತೆ, ಬೆನ್ನು-ಕುತ್ತಿಗೆ ನೋವು, ಒತ್ತಡ ಮತ್ತು ಸಂವಹನ ಕೌಶಲ್ಯ ಕುಗ್ಗುವಂತೆ ಮಾಡುತ್ತದೆ.

ವಿಟಮಿನ್ D ಕೊರತೆಯಿಂದ ರಿಕೆಟ್ಸ್, ಮೂಳೆ ದುರ್ಬಲತೆ ಮತ್ತು ಹಲ್ಲು ಸಮಸ್ಯೆಗಳು ಕಾಡುತ್ತವೆ. ಕಣ್ಣುಗಳ ಮೇಲೆ ಡಿಜಿಟಲ್ ಸ್ಕ್ರೀನ್ ಒತ್ತಡ ಹೆಚ್ಚುವುದು ದೃಷ್ಟಿ ಸಮಸ್ಯೆಗೆ ಕಾರಣವಾಗುತ್ತದೆ. ಕ್ಲಿನಿಕಲ್ ಅಧ್ಯಯನಗಳು ದೀರ್ಘಕಾಲ ಕುಳಿತಿರುವುದರಿಂದ ಏಕಾಗ್ರತೆ ಕೊರತೆ, ಕಿರಿಕಿರಿ ಮತ್ತು ಹೃದಯ ಸಮಸ್ಯೆಗಳ ಅಪಾಯ ಹೆಚ್ಚುತ್ತದೆ ಎಂದು ಹೇಳುತ್ತವೆ.

ಮಕ್ಕಳಲ್ಲಿ ಆಟದ ಕೊರತೆ ಮತ್ತು ಹೆಚ್ಚು ಕ್ಯಾಲೋರಿ ಆಹಾರ ಸೇವನೆಯು ತೂಕ ಹೆಚ್ಚಿಸಿ ಸ್ಥೂಲಕಾಯ ಮತ್ತು ಮಧುಮೇಹದ ಹಾದಿ ಹಿಡಿಯುವಂತಾಗಿಸುತ್ತದೆ. ಜೊತೆಗೆ, ಎಲ್‌ಇಡಿ ಸ್ಕ್ರೀನ್‌ನ ನೀಲಿ ಬೆಳಕು ನಿದ್ರೆ ಅಡಚಣೆ, ತಲೆನೋವು ಹಾಗೂ ಮೈಗ್ರೇನ್‌ಗೆ ಕಾರಣವಾಗುತ್ತದೆ.

ಮಕ್ಕಳು ಕೇವಲ ಅಂಕಗಳಿಗೆ ಮಾತ್ರ ಸೀಮಿತವಾಗದೆ, ಹೊರಗೆ ಆಟವಾಡಿ, ಸೂರ್ಯನ ಬೆಳಕಿಗೆ ತಾವು ಒಡ್ಡಿಕೊಂಡು, ದೈಹಿಕ ಚಟುವಟಿಕೆಗಳಲ್ಲಿ ತೊಡಗಿದಾಗ ಮಾತ್ರ ಆರೋಗ್ಯಕರ ಹಾಗೂ ಸಂತೋಷಕರ ಜೀವನ ನಡೆಸಲು ಸಾಧ್ಯ. ಪೋಷಕರು ಮತ್ತು ಶಿಕ್ಷಕರು ಮಕ್ಕಳಿಗೆ ಸಮತೋಲನ ಜೀವನಶೈಲಿಯನ್ನು ಕಲಿಸುವುದು ಅತ್ಯವಶ್ಯಕ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!