ಹೊಸದಿಗಂತ ಡಿಜಿಟಲ್ ಡೆಸ್ಕ್
ಬಾಲಿವುಡ್ ಲವ್ ಬರ್ಡ್ಸ್ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ಡೇಟ್ ಕೊನೆಗೂ ಫಿಕ್ಸ್ ಆಗಿದ್ದು, ಈ ಮೂಲಕ ಹಲವು ದಿನಗಳಿಂದ ಹರಿದಾಡ್ತಿದ್ದ ಊಹಾಪೋಷಗಳಿಗೆ ಸ್ಪಷ್ಟನೆ ಸಿಕ್ಕಿದೆ.
ಈ ಬಗ್ಗೆ ಅವರ ಕುಟುಂಬದ ಆಪ್ತರೇ ಸ್ಪಷ್ಟಪಡಿಸಿದ್ದು, ಇಬ್ಬರ ವಿವಾಹವು ಏಪ್ರಿಲ್ 14 ರಂದು ನಡೆಯಲಿದೆ, ಮದುವೆ ಕಾರ್ಯಗಳು ಏಪ್ರಿಲ್ 13 ರಂದು ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.
ಆಲಿಯಾ ಅವರ ಸಹೋದರ ರಾಹುಲ್ ಭಟ್ ಮದುವೆಗೆ ತಮಗೆ ಆಹ್ವಾನ ಬಂದಿದೆ ಎಂದು ದೃಢಪಡಿಸಿದ್ದು, ನಟಿಯ ಮೆಹೆಂದಿ ಸಮಾರಂಭ ಏಪ್ರಿಲ್ 13 ರಂದು ನಡೆಯಲಿದೆ.
4 ದಿನಗಳ ಕಾಲ ಮದುವೆ ಕಾರ್ಯಗಳು ನಡೆಯಲಿವೆ. ಆರ್ಕೆ ಅವರ ಬಾಂದ್ರಾ ಮನೆ ವಾಸ್ತುದಲ್ಲಿ ಸಮಾರಂಭ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
