ಬಾಲಿವುಡ್ ನಟ ಗೋವಿಂದ ದಾಂಪತ್ಯದಲ್ಲಿ ಬಿರುಕು: ವಿಚ್ಛೇದನಕ್ಕೆ ಅರ್ಜಿ ಹಾಕಿದ ಸುನೀತಾ ಅಹುಜಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್ ನಟ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ನಡುವಿನ ಸಂಬಂಧದ ಬಿರುಕು ಈಗ ಮತ್ತಷ್ಟು ಗಂಭೀರವಾಗಿದೆ. ಹಲವು ವಾರಗಳಿಂದಲೂ ಇವರ ವಿಚ್ಛೇದನದ ಬಗ್ಗೆ ವದಂತಿಗಳು ಹರಿದಾಡುತ್ತಿದ್ದರೂ, ಇದೀಗ ಸ್ಪಷ್ಟ ಮಾಹಿತಿ ಹೊರಬಂದಿದೆ. ಸುನೀತಾ ಬಾಂದ್ರಾದ ಕುಟುಂಬ ನ್ಯಾಯಾಲಯದಲ್ಲಿ ಅಧಿಕೃತವಾಗಿ ವಿಚ್ಛೇದನ ಅರ್ಜಿ ಸಲ್ಲಿಸಿರುವುದು ಪ್ರಕರಣಕ್ಕೆ ಹೊಸ ತಿರುವು ನೀಡಿದೆ.

ಸುನೀತಾ ಅವರು ಅರ್ಜಿಯಲ್ಲಿ “ವಿವಾಹದಲ್ಲಿ ಮೋಸ, ಕ್ರೌರ್ಯ ಹಾಗೂ ಪ್ರತ್ಯೇಕ ವಾಸ” ಎಂಬ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಹಿಂದು ವಿವಾಹ ಕಾಯ್ದೆ 1955ರ ಸೆಕ್ಷನ್ 13 (1)(i), (ia), (ib) ಅಡಿಯಲ್ಲಿ ಅವರು ನ್ಯಾಯಾಲಯವನ್ನು ಸಂಪರ್ಕಿಸಿರುವುದಾಗಿ ವರದಿಯಾಗಿದೆ. ಇದಕ್ಕೆ ಮುನ್ನ ವ್ಲಾಗ್‌ನಲ್ಲಿ ಮಾತನಾಡಿದಾಗ ಸುನೀತಾ, ತಮ್ಮ ವೈವಾಹಿಕ ಜೀವನದ ಏರಿಳಿತಗಳ ಬಗ್ಗೆ ಸ್ಪಷ್ಟವಾಗಿ ಹೇಳಿಕೊಂಡಿದ್ದರು. ಅವರು ದೇವರ ಮೇಲಿನ ನಂಬಿಕೆಯನ್ನು ಹಂಚಿಕೊಂಡು, “ಕುಟುಂಬ ಒಡೆಯಲು ಯಾರು ಪ್ರಯತ್ನಿಸಿದರೂ ತಾಯಿ ಅವರನ್ನು ಬಿಡುವುದಿಲ್ಲ” ಎಂದು ಭಾವೋದ್ರಿಕ್ತವಾಗಿ ಹೇಳಿದ್ದಾರೆ.

ವರದಿಗಳ ಪ್ರಕಾರ, ನ್ಯಾಯಾಲಯವು ಮೇ 25ರಂದು ಗೋವಿಂದ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಆದರೆ, ವಿಚಾರಣೆಯ ವೇಳೆ ಸುನೀತಾ ನಿಯಮಿತವಾಗಿ ನ್ಯಾಯಾಲಯಕ್ಕೆ ಹಾಜರಾಗುತ್ತಿದ್ದರೆ, ಗೋವಿಂದ ಹಾಜರಾಗದೆ ಇರುವುದರಿಂದ ವಿಷಯ ಮತ್ತಷ್ಟು ಸಂಕೀರ್ಣವಾಗಿದೆ. ಇದರ ನಡುವೆ, ಇವರ ನಡುವಿನ ಭಿನ್ನಾಭಿಪ್ರಾಯಕ್ಕೆ ಕಾರಣ ಎನ್ನಲಾಗುತ್ತಿರುವುದು ಗೋವಿಂದ ಅವರ ಮತ್ತೊಬ್ಬ ನಟಿಯೊಂದಿಗೆ ಹೊಂದಿರುವ ಸಂಬಂಧ ಎಂಬ ವದಂತಿ.

37 ವರ್ಷಗಳಿಂದ ಒಟ್ಟಿಗೆ ಜೀವನ ಸಾಗಿಸಿರುವ ಈ ಜೋಡಿ, ಈಗ ಸಂಪೂರ್ಣವಾಗಿ ಬೇರ್ಪಟ್ಟಿರುವುದಾಗಿ ಸುನೀತಾ ತಮ್ಮ ವ್ಲಾಗ್‌ನಲ್ಲಿ ತಿಳಿಸಿದ್ದಾರೆ. ಅವರು “ನಾವು ಒಟ್ಟಿಗೆ ಸಿನಿಮಾ ನೋಡಿ ಅದೆಷ್ಟು ವರ್ಷಗಳಾಗಿದೆ ಎಂಬುದೇ ನನಗೆ ನೆನಪಿಲ್ಲ” ಎಂದು ಹೇಳಿಕೊಂಡಿದ್ದಾರೆ. ಮತ್ತೊಂದು ಸಂದರ್ಭದಲ್ಲಿಯೂ, “ಮುಂದಿನ ಜನ್ಮದಲ್ಲಿ ಅವನು ನನ್ನ ಗಂಡನಾಗಬಾರದು” ಎಂಬ ಹೇಳಿಕೆಯನ್ನು ಈ ಹಿಂದೆ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!