ಹೊಸದಿಗಂತ ಡಿಜಿಟಲ್ ಡೆಸ್ಕ್:
ಕ್ವಾರಿ ಹೊಂಡದ ನೀರಿನಲ್ಲಿ ಈಜಲು ಹೋದ ಕಾರ್ಮಿಕನೊರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಕಣಿವೆನಾರಾಯಣಪುರದ ಬಳಿ ನಡೆದಿದೆ.
ಬಿಹಾರ ಮೂಲಕದ ಮಹಮ್ಮದ್ ಕೈಫ್(27) ಮೃತ ದುರ್ದೈವಿ. ಕೈಫ್ ಮುದ್ದೇನಹಳ್ಳಿ ಬಳಿಯ ಸತ್ಯಸಾಯಿ ಆಸ್ಪತ್ರೆಯ ಕಟ್ಟಡ ನಿರ್ಮಾಣದ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಸಹ ಕಾರ್ಮಿಕರೊಂದಿಗೆ ಕೈಫ್ ಕ್ವಾರಿ ಹೊಂಡದಲ್ಲಿ ಈಜಲು ತೆರಳಿದ್ದ. ಈಜು ಬಾರದ ಕೈಫ್ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

