ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾರ್ಖಂಡ್ ರಾಜಧಾನಿ ರಾಂಚಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಭಾರಿ ಉಲ್ಲಂಘನೆಯಾಗಿದೆ.
ಪ್ರಧಾನಿ ಮೋದಿ ಬಿರ್ಸಾ ಮೆಮೋರಿಯಲ್ ಪಾರ್ಕ್ಗೆ ತೆರಳುತ್ತಿದ್ದ ವೇಳೆ ಮಹಿಳೆಯೊಬ್ಬರು ಇದ್ದಕ್ಕಿದ್ದಂತೆ ಪ್ರಧಾನಿಯವರ ಕಾರಿನ ಮುಂದೆ ಬಂದಿದ್ದಾರೆ.
ಪ್ರಧಾನಿ ಮೋದಿ ಅವರ ಕಾರು (ಪಿಎಂ ನರೇಂದ್ರ ಮೋದಿ ಬೆಂಗಾವಲು) ಸ್ವಲ್ಪ ಸಮಯದವರೆಗೆ ಅಲ್ಲಿಯೇ ನಿಂತಿತು. ಕೆಲವೇ ಸೆಕೆಂಡುಗಳಲ್ಲಿ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ ಮಹಿಳೆಯನ್ನ ಅಲ್ಲಿಂದ ಬೇರೆಡೆ ಕರೆದೊಯ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ರಾಂಚಿಗೆ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಬೆಳಿಗ್ಗೆ ರಾಜಭವನದಿಂದ ಹೊರಟು ಜೈಲ್ ಚೌಕ್’ನಲ್ಲಿರುವ ಬಿರ್ಸಾ ಮುಂಡಾ ಮೆಮೋರಿಯಲ್ ಪಾರ್ಕ್’ಗೆ ತೆರಳುತ್ತಿದ್ದರು.
ಪ್ರಧಾನಿ ಮೋದಿಯವರ ಬೆಂಗಾವಲು ವಾಹನವನ್ನ ನಿಲ್ಲಿಸಿದ್ದರಿಂದ ಎನ್ಎಸ್ಜಿ ಮತ್ತು ಇತರ ಭದ್ರತಾ ಸಿಬ್ಬಂದಿ ತಕ್ಷಣ ಜಾಗೃತರಾದರು. ಭದ್ರತಾ ತಂಡ ಮತ್ತು ಪೊಲೀಸ್ ಸಿಬ್ಬಂದಿ ತಕ್ಷಣ ಮಹಿಳೆಯನ್ನು ರಸ್ತೆ ಬದಿಗೆ ಕರೆದೊಯ್ದರು. ಅದರ ನಂತರ ಪ್ರಧಾನಿಯವರ ಬೆಂಗಾವಲು ಮುಂದೆ ಸಾಗಿತು.