Beauty Tips | ನಿಮ್ಮ ಚರ್ಮಕ್ಕೆ ಮೊಸರಿನಿಂದಾಗುತ್ತೆ ಮ್ಯಾಜಿಕ್! ನೋಡ್ಬೇಕಾ? ಹಾಗಿದ್ರೆ ಈ ರೀತಿ ಮಾಡಿ!

ನಿಮ್ಮ ತ್ವಚೆಗೆ ನೈಸರ್ಗಿಕ ಮಾಯಿಶ್ಚರೈಸರ್ ಬೇಕಾ? ಗ್ಲೋಯಿಂಗ್ ಎಫ್ಫೆಕ್ಟ್ ನೀಡುವ ಫೇಸ್‌ಪ್ಯಾಕ್ ಹುಡುಕುತ್ತಿದ್ದೀರಾ? ಹಾಗಾದರೆ ಮನೆಯಲ್ಲಿಯೇ ಸಿಗುವ ಮೊಸರು ನಿಮ್ಮ ಮುಖದ ಚೆಲುವಿಗೆ ಪರಿಪೂರ್ಣ ಪರಿಹಾರ. ಮೊಸರು ಅನೇಕ ಆರೋಗ್ಯಕಾರಿ ಗುಣಲಕ್ಷಣಗಳನ್ನು ಹೊಂದಿದ್ದು, ಚರ್ಮದ ಆರೈಕೆಗೆ ಬಹುಮುಖವಾಗಿ ಉಪಯೋಗಿಸಬಹುದು.

ಮೊಸರಿನಲ್ಲಿ ಲ್ಯಾಕ್ಟಿಕ್ ಆಮ್ಲವಿದೆ. ಇದು ಸತ್ತ ಚರ್ಮದ ಕೋಶಗಳನ್ನು ತೆರವುಗೊಳಿಸಿ ನಿಮ್ಮ ತ್ವಚೆಗೆ ಹೊಸ ಚೈತನ್ಯ ನೀಡುತ್ತದೆ. ಜೊತೆಗೆ ಇದರಲ್ಲಿರುವ ನೈಸರ್ಗಿಕ ಕೊಬ್ಬು ಮತ್ತು ಪ್ರೋಟೀನ್ ತ್ವಚೆಗೆ ತೇವಾಂಶ ಒದಗಿಸುವ ಮೂಲಕ ಮಾಯಿಶ್ಚರೈಸರ್ ಆಗಿ ಕಾರ್ಯನಿರ್ವಹಿಸುತ್ತದೆ. ಮುಖಕ್ಕೆ ಮೊಸರು ಹಚ್ಚಿದರೆ ಚರ್ಮ ಮೃದುವಾಗುತ್ತದೆ, ಹೊಳೆಯುತ್ತದೆ ಮತ್ತು ಹೆಚ್ಚು ಆರೋಗ್ಯಕರವಾಗುತ್ತದೆ.

ಮೊಸರು ತ್ವಚೆಯ ಬ್ಯಾಕ್ಟೀರಿಯಾ ಸಮತೋಲನವನ್ನು ಸರಿಗೊಳಿಸಿ ಉರಿಯೂತ, ಕಲೆ, ಬಿರುಕುಗಳನ್ನು ಕಡಿಮೆ ಮಾಡುತ್ತದೆ. ನಿಮ್ಮ ಚರ್ಮಕ್ಕೆ ಇನ್ನಷ್ಟು ಪ್ರಾಕೃತಿಕ ಗ್ಲೋ ನೀಡಲು ಇದು ಸಹಕಾರಿಯಾಗಿದೆ. ಎಕ್ಸ್ ಫೋಲಿಯೇಟಿಂಗ್ ಗುಣದಿಂದ ಕಪ್ಪು ಕಲೆಗಳು, ಪಿಗ್ಮೆಂಟೇಶನ್ ಕೂಡ ಕಡಿಮೆಯಾಗುತ್ತದೆ.

ಯಾವೆಲ್ಲ ಫೇಸ್‌ಮಾಸ್ಕ್‌ ಮಾಡಬಹುದು?

ಜೇನುತುಪ್ಪ ಮತ್ತು ಮೊಸರು ಮಿಕ್ಸ್ ಮಾಡುವುದು ಒಣ ಚರ್ಮಕ್ಕೆ ಉತ್ತಮ
ಮುಲ್ತಾನಿ ಮಿಟ್ಟಿ ಮತ್ತು ಮೊಸರು ಎಣ್ಣೆಯುಕ್ತ ಚರ್ಮಕ್ಕೆ ಫಿಟ್
ಮೊಸರು, ಜೇನುತುಪ್ಪ ಮತ್ತು ನಿಂಬೆ ರಸ ಕಾಂಬಿನೇಶನ್ ಚರ್ಮಕ್ಕೆ ಬೆಸ್ಟ್
ಸೌತೆಕಾಯಿ, ಅಲೋವೆರಾ ಜೆಲ್ ಮತ್ತು ಮೊಸರು ಸೂಕ್ಷ್ಮ ಚರ್ಮಕ್ಕೆ ಸೂಕ್ತ

ಮೊಸರನ್ನು ವಾರದಲ್ಲಿ 2-3 ಬಾರಿ ಬಳಸಿದರೆ, ತ್ವಚೆಯ ಹೊಳಪು, ಮೃದುತ್ವ ಹಾಗೂ ತೇವಾಂಶ ನಿಯಂತ್ರಣವಾಗೋದರಲ್ಲಿ ಅನುಮಾನವಿಲ್ಲ. ಯಾವುದೇ ದುಬಾರಿ ಬ್ಯೂಟಿ ಕ್ರೀಮ್‌ಗಿಂತ ಮೊಸರು ಹೆಚ್ಚು ಪರಿಣಾಮಕಾರಿ ಎಂಬುದು ಸತ್ಯ.(Disclaimer: ಈ ಲೇಖನವು ಸಾರ್ವಜನಿಕ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಯಾಧಾರಿತವಾಗಿದೆ.)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!