Beauty Tips | ಟೊಮೊಟೊ ಸಿಪ್ಪೆಯಲ್ಲಿದೆ ನಿಮ್ಮ ಸೌಂದರ್ಯದ ಗುಟ್ಟು! ಒಂದ್ಸಲ ಮುಖಕ್ಕೆ ಹಚ್ಚಿ ನೋಡಿ

ಇಂದಿನ ಮಾಲಿನ್ಯಭರಿತ ಜೀವನಶೈಲಿಯಲ್ಲಿ ತ್ವಚೆಯ ಆರೈಕೆ ಅತ್ಯಂತ ಮುಖ್ಯವಾಗಿದೆ. ದುಬಾರಿ ಬ್ಯೂಟಿ ಟ್ರೀಟ್ಮೆಂಟ್‌ಗಳು ಎಲ್ಲರಿಗೂ ಕೈಗೆಟುಕುವುದಿಲ್ಲ. ಅಂತಹ ಸಂದರ್ಭದಲ್ಲಿ, ಸರಳ ಮನೆಮದ್ದುಗಳಿಂದಲೂ ಉತ್ತಮ ಫಲಿತಾಂಶ ಪಡೆಯಬಹುದು.

ಟೊಮ್ಯಾಟೊ ಸಿಪ್ಪೆ ಚರ್ಮಕ್ಕೆ ವಿಶೇಷ ಲಾಭ ನೀಡುತ್ತದೆ. ಇದರಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್‌ಗಳು, ವಿಟಮಿನ್ C ಹಾಗೂ ಉರಿಯೂತ ತಗ್ಗಿಸುವ ಗುಣಗಳು ಮುಖದ ಹೊಳಪು ಹೆಚ್ಚಿಸಿ, ಮೊಡವೆ ಕಡಿಮೆ ಮಾಡಲು ಸಹಾಯ ಮಾಡುತ್ತವೆ. ನಿಯಮಿತವಾಗಿ ಬಳಸಿದರೆ ಚರ್ಮದ ಮೇಲಿನ ಹೆಚ್ಚುವರಿ ಎಣ್ಣೆ ನಿಯಂತ್ರಣವಾಗುತ್ತದೆ.

ಬಳಸುವ ವಿಧಾನ:

ತಾಜಾ ಟೊಮ್ಯಾಟೊವನ್ನು ತೊಳೆಯಿರಿ, ಸಿಪ್ಪೆಯನ್ನು ನಿಧಾನವಾಗಿ ಬೇರ್ಪಡಿಸಿ. ನಂತರ ಸಿಪ್ಪೆಯ ಒಳಭಾಗವನ್ನು ನೇರವಾಗಿ ಮುಖದ ಮೇಲೆ ಉಜ್ಜಿಕೊಳ್ಳಿ. 10 ನಿಮಿಷ ಮಸಾಜ್ ಮಾಡಿದ ನಂತರ ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ ಮತ್ತು ಮಾಯಿಶ್ಚರೈಸರ್ ಹಚ್ಚಿ.

ಫೇಸ್ ಪ್ಯಾಕ್ ತಯಾರಿಸುವುದು:

ಟೊಮ್ಯಾಟೊ ಸಿಪ್ಪೆಯನ್ನು ರುಬ್ಬಿ, ಅದಕ್ಕೆ ಸ್ವಲ್ಪ ಮೊಸರು ಅಥವಾ ಜೇನುತುಪ್ಪ ಸೇರಿಸಿ. 20 ನಿಮಿಷ ಹಚ್ಚಿ ನಂತರ ತೊಳೆಯಿರಿ.

ಸ್ಕ್ರಬ್ ವಿಧಾನ:

ಸಿಪ್ಪೆಯ ಒಳಗೆ ಸ್ವಲ್ಪ ಸಕ್ಕರೆ ಹಾಕಿ, ಲಘುವಾಗಿ ಮುಖದ ಮೇಲೆ ಉಜ್ಜಿಕೊಳ್ಳಿ. 15 ನಿಮಿಷದ ನಂತರ ತೊಳೆಯಿರಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡಬಹುದು.

ಈ ಸರಳ ವಿಧಾನಗಳಿಂದ ದುಬಾರಿ ಚಿಕಿತ್ಸೆಗಳನ್ನು ತೆಗೆದುಕೊಳ್ಳದೆ ಸಹ ಮುಖಕ್ಕೆ ನೈಸರ್ಗಿಕ ಹೊಳಪು ನೀಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!