ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಿಲ್ಲರ್ BMTC ಗೆ ಮತ್ತೊಂದು ಮಗುವಿನ ಜೀವ ಹೋಗಿದೆ.
ಬೆಂಗಳೂರು ನಗರದ ಕೆ.ಆರ್ ಮಾರ್ಕೆಟ್ ಬಳಿ KA 57F 6456 ನಂಬರಿನ ಬಿಎಂಟಿಸಿ ಬಸ್ ಮತ್ತೊಂದು ಮಗುವಿನ ಜೀವ ಬಲಿ ಪಡೆದುಕೊಂಡಿದೆ. ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಸದ್ಯ ಸ್ಥಳೀಯರು ಬಿಎಂಟಿಸಿ ಚಾಲಕ ಮತ್ತು ನಿರ್ವಾಹಕನನ್ನು ಹಲಸೂರು ಗೇಟ್ ಸಂಚಾರಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಬಿಎಂಟಿಸಿ ಸುರಕ್ಷತಾ ಚಾಲನೆಯತ್ತ ಗಮನವನ್ನು ಹರಿಸದ ಚಾಲಕರನ್ನು ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಖಡಕ್ ಸಂದೇಶ ರವಾನಿಸಿತ್ತು. ಆ ಬೆನ್ನಲ್ಲೇ ಮತ್ತೊಂದು ಅಪಘಾತ ನಡೆದಿದೆ.