ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ದಕ್ಷಿಣ ಆಫ್ರಿಕಾ ಬರೋಬ್ಬರಿ 229 ರನ್ಗಳ ಗೆಲುವು ದಾಖಲಿಸಿದೆ.
ಶನಿವಾರ ವಾಂಖಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ದಕ್ಷಿಣ ಆಫ್ರಿಕಾ 7 ವಿಕೆಟ್ಗೆ 399ರನ್ಗಳ ಬೃಹತ್ ಮೊತ್ತವನ್ನು ಪೇರಿಸಿತು. ಪ್ರತಿಯಾಗಿ, ಹರಿಣಗಳ ತಂಡದ ಶಿಸ್ತಿನ ಬೌಲಿಂಗ್ ಮುಂದೆ ಮಂಡಿಯೂರಿದ ಇಂಗ್ಲೆಂಡ್ ತಂಡ 22 ಓವರ್ಗಳಲ್ಲಿ 170 ರನ್ಗೆ ಆಲೌಟ್ ಆಗುವ ಮೂಲಕ 229 ರನ್ಗಳ ಸೋಲು ಕಂಡಿತು.
ಇದು ಏಕದಿನದಲ್ಲಿಇಂಗ್ಲೆಂಡ್ನ ಅತ್ಯಂತ ಕೆಟ್ಟ ಸೋಲು ಎನಿಸಿದೆ. ಇದಕ್ಕೂ ಮುನ್ನ 2022ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಮೆಲ್ಬೋರ್ನ್ನಲ್ಲಿ 222 ರನ್ಗಳ ಸೋಲು ಕಂಡಿದ್ದು ಇಂಗ್ಲೆಂಡ್ ತಂಡದ ಕೆಟ್ಟ ಸೋಲು ಎನಿಸಿತ್ತು. ಮತ್ತೊಂದೆಡೆ ಇದು ವಿಶ್ವಕಪ್ನಲ್ಲಿ ತಂಡವೊಂದರ 2ನೇ ದೊಡ್ಡ ಗೆಲುವು ಎನಿಸಿದೆ.
