ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಚಾಮುಂಡಿ ಬೆಟ್ಟ ಕೇವಲ ಹಿಂದೂಗಳ ಸ್ವತ್ತಲ್ಲ ಎನ್ನುವ ಡಿಸಿಎಂ ಡಿಕೆಶಿ ಹೇಳಿಕೆಗೆ ವಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿಕಾರಿದ್ದಾರೆ.
ಚಾಮುಂಡಿ ಬೆಟ್ಟ ಪಕ್ಕಾ ಹಿಂದೂಗಳ ಸ್ವತ್ತು. ಮುಸ್ಲಿಮರ ಸ್ವತ್ತಲ್ಲ. ನೂರು ಡಿಕೆಶಿ ಬಂದರೂ ಏನು ಮಾಡೋಕೆ ಆಗಲ್ಲ. ಇದು ಹಿಂದೂಗಳ ಸ್ವತ್ತೆ. ಧರ್ಮಸ್ಥಳ, ತಿರುಪತಿ, ಎಲ್ಲವೂ ಹಿಂದೂಗಳ ಸ್ವತ್ತೆ. ಇದನ್ನ ಮುಟ್ಟಿದ್ರೆ ದಂಗೆ ಆಗುತ್ತೆ ಹುಷಾರ್ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಎಲ್ಲಾ ಧರ್ಮವನ್ನ ಒಪ್ಪುತ್ತೇನೆ ಅನ್ನೋದು ಕಾಂಗ್ರೆಸ್ಗೆ ಅರ್ಥ ಆಗಲ್ಲ. ಇದನ್ನ ಒಪ್ಪಲ್ಲ. ನಮಸ್ತೆ ಇಟಲಿ ಅಂತ ಹೇಳಿದ್ರೆ ಡಿಕೆಶಿಗೆ ಅವಾರ್ಡ್ ಕೊಟ್ಟಿರುವರು. ಈಗ ಅವರನ್ನ ಎಲ್ಲರೂ ವಿರೋಧಿಸುತ್ತಿದ್ದಾರೆ. ಅವರ ಮೇಲೆ ಮುಗಿ ಬೀಳುತ್ತಿದ್ದಾರೆ. ಕಾಂಗ್ರೆಸ್ಗೆ ಉಳಿಗಾಲವಿಲ್ಲ. ಮುಂದೆ ಕಾಂಗ್ರೆಸ್ಗೆ ಭವಿಷ್ಯ ಇಲ್ಲ. ಕ್ಷಮೆ ಕೇಳೋದು ಯಾಕೆ? ಭಾರತಮಾತೆಗೆ ಅಥವಾ ಕನ್ನಡ ಮಾತೆ, ಮುಸ್ಲಿಮರಿಗೆ ಬೈಯ್ದಿದ್ದಾರಾ? ಆಶ್ಚರ್ಯ ಆಗ್ತಿದೆ. ತಪ್ಪು ಬಯ್ದಿದ್ದರೆ ಕ್ಷಮೆ ಕೇಳೋದು ಸರಿ. ಭಾರತ ಮಾತೆಗೆ ನಮಸ್ಕಾರ ಹೇಳುವುದರಲ್ಲಿ ತಪ್ಪೇನು ಎಂದು ಪ್ರಶ್ನಿಸಿದ್ದಾರೆ.