ನಾನು ಮಾಡೋ ಸಿನಿಮಾಗಳ ಸಂಖ್ಯೆ ಕಡಿಮೆ ಆಗ್ಬಹುದು ಆದ್ರೆ…..: ಹೀಗ್ಯಾಕಂದ್ರು ನಟಿ ಸಮಂತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಕ್ಷಿಣ ಭಾರತದ ಜನಪ್ರಿಯ ನಟಿ ಸಮಂತಾ ರುತ್ ಪ್ರಭು ತಮ್ಮ ಸಿನಿ ಜೀವನ ಮತ್ತು ವೈಯಕ್ತಿಕ ಜೀವನದ ಕಾರಣಗಳಿಂದ ಸದಾ ಸುದ್ದಿಯಲ್ಲೇ ಇರುತ್ತಾರೆ. ಇತ್ತೀಚೆಗೆ ಅವರು ನೀಡಿದ ಸಂದರ್ಶನದಲ್ಲಿ, ಮುಂದೆ ತಮ್ಮ ಸಿನಿಮಾ ಆಯ್ಕೆ ಮಾಡುವ ವಿಧಾನದಲ್ಲಿ ದೊಡ್ಡ ಬದಲಾವಣೆ ತಂದಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರೋ ಸ್ಯಾಮ್ “ನಾನು ದಿನಕ್ಕೆ ಐದು ಸಿನಿಮಾಗಳಲ್ಲಿ ಕೆಲಸ ಮಾಡುವುದಿಲ್ಲ. ನನ್ನ ದೇಹದ ಮಾತನ್ನು ಕೇಳಲು ನಿರ್ಧರಿಸಿದ್ದೇನೆ. ನನಗೆ ನಿಜವಾಗಿಯೂ ಇಷ್ಟವಾದ ಮತ್ತು ಪ್ರೇರಣೆ ನೀಡುವ ಕೆಲಸಗಳನ್ನು ಮಾತ್ರ ಮಾಡುತ್ತೇನೆ. ಇದರಿಂದಾಗಿ ನನ್ನ ಸಿನಿಮಾಗಳ ಸಂಖ್ಯೆ ಕಡಿಮೆಯಾಗಬಹುದು, ಆದರೆ ಗುಣಮಟ್ಟ ಯಾವತ್ತೂ ಕಡಿಮೆಯಾಗುವುದಿಲ್ಲ” ಎಂದಿದ್ದಾರೆ.

“ಹಿಂದೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದೇನೆ, ಆದರೆ ಅವುಗಳಲ್ಲಿ ಕೆಲವು ನನಗೆ ತೃಪ್ತಿ ನೀಡಲಿಲ್ಲ. ಆದರೂ ನಾನು ಮಾಡುತ್ತಿದ್ದೆ. ಈಗ ನಾನು ಎಚ್ಚರಿಕೆಯಿಂದ ಮತ್ತು ಸಮರ್ಪಣಾಭಾವದಿಂದ ಕೆಲಸ ಮಾಡಲು ನಿರ್ಧರಿಸಿದ್ದೇನೆ. ನನಗೆ ಸಂತೋಷ ಕೊಡುವ ಸಿನಿಮಾಗಳಲ್ಲಿ ಮಾತ್ರ ನಟಿಸುತ್ತೇನೆ” ಎಂದು ಹೇಳಿದ್ದಾರೆ.

2010ರಲ್ಲಿ ಬಿಡುಗಡೆಯಾದ ಬನಾ ಕಾತಡಿ ಚಿತ್ರದಿಂದ ತಮಿಳು ಚಿತ್ರರಂಗಕ್ಕೆ ಕಾಲಿಟ್ಟ ಸಮಂತಾ, ಬಳಿಕ ತಮಿಳು ಮತ್ತು ತೆಲುಗು ಎರಡರಲ್ಲೂ ಅಗ್ರ ನಟಿಯಾಗಿ ಹೆಸರು ಮಾಡಿದರು. ಆದರೆ ಅವರಿಗೆ ಮಯೋಸಿಟಿಸ್ ಎಂಬ ಆರೋಗ್ಯ ಸಮಸ್ಯೆ ಪತ್ತೆಯಾದ ನಂತರ, ಚಿತ್ರರಂಗದಲ್ಲಿ ಅವರ ಚಟುವಟಿಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಕೊನೆಯದಾಗಿ 2023ರಲ್ಲಿ ತೆಲುಗು ಸಿನಿಮಾ ಕುಶಿಯಲ್ಲಿ ನಟಿಸಿದ್ದರು. 2024ರಲ್ಲಿ ಬಿಡುಗಡೆಯಾದ ಶುಭಂ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಉತ್ತಮ ಮೆಚ್ಚುಗೆ ಪಡೆದಿದ್ದರು.

ವೈಯಕ್ತಿಕ ಜೀವನದ ಕಡೆ ನೋಡಿದರೆ, ಸಮಂತಾ ನಟ ನಾಗ ಚೈತನ್ಯರನ್ನು 2017ರಲ್ಲಿ ಮದುವೆಯಾಗಿದ್ದರು. ಆದರೆ 2021ರಲ್ಲಿ ಅವರ ದಾಂಪತ್ಯ ಮುರಿದು ವಿಚ್ಛೇದನ ಪಡೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!