ಹೊಸದಿಗಂತ ವರದಿ ಮಂಗಳೂರು:
ಯುವಕನ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಯುಧದಿಂದ ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಮಂಗಳೂರು ನಗರದ ಹೊರವಲಯ ತೊಕ್ಕೊಟ್ಟು ಎಂಬಲ್ಲಿ ನಡೆದಿದ್ದು, ಈ ಬೆಳವಣಿಗೆ ಆತಂಕಕ್ಕೆ ಕಾರಣವಾಗಿದೆ.

ಅಳೇಕಲ ನಿವಾಸಿ ಫೈಝಲ್ ಗಾಯಗೊಂಡಿರುವ ವ್ಯಕ್ತಿ. ಫೈಝಲ್ ಗುರುವಾರ ಮಧ್ಯರಾತ್ರಿ 12.30ಕ್ಕೆ ಒಂಭತ್ತುಕೆರೆಯ ಪತ್ನಿ ಮನೆಯಿಂದ ಕಲ್ಲಾಪುವಿನ ಗ್ಲೋಬಲ್ ಮಾರುಕಟ್ಟೆಗೆ ತನ್ನ ಸ್ಕೂಟರಲ್ಲಿ ಕೆಲಸಕ್ಕೆ ತೆರಳುತ್ತಿದ್ದ ವೇಳೆ ಬೈಕ್ ಒಂದರಲ್ಲಿ ಹಿಂಬಾಲಿಸಿ ಬಂದ ಇಬ್ಬರು ತಲ್ವಾರು ಬೀಸಿದ್ದಾರೆ ಎಂದು ಹೇಳಲಾಗಿದೆ.
ಮತ್ತೊಂದು ಬೈಕಲ್ಲಿ ಮತ್ತಿಬ್ಬರು ಯುವಕರು ಮಾರಕಾಯುಧಗಳೊಂದಿಗೆ ಬಂದಿದ್ದು, ಬಳಿಕ ಎರಡು ಬೈಕಲ್ಲಿ ನಾಲ್ವರು ಮಂಗಳೂರಿನ ಕಡೆ ಪಲಾಯನಗೈದಿದ್ದಾರೆ ಎಂದು ಫೈಜಲ್ ನೀಡಿದ ದೂರಿನಂತೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯ ಸತ್ಯಾಸತ್ಯತೆ ಬಗ್ಗೆ ಉಳ್ಳಾಲ ಪೊಲೀಸರು ಘಟನೆ ನಡೆದಿದೆ ಎನ್ನಲಾದ ತೊಕ್ಕೊಟ್ಟುವಿನ ಮಾಯಾ ಬಾರ್ ಬಳಿಯ ಸಿಸಿಟಿವಿ ಫೂಟೇಜ್ ಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ.

