ಸಾಮಾಗ್ರಿಗಳು
ಈರುಳ್ಳಿ
ಹಸಿಮೆಣಸು
ಶೇಂಗಾ
ನಿಂಬೆಹುಳಿ
ಉಪ್ಪು
ಅರಿಶಿಣ ಪುಡಿ
ಗರಂಮಸಾಲಾ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಮಾಡುವ ವಿಧಾನ
ಮೊದಲು ಮಿಕ್ಸಿಗೆ ಹಸಿಮೆಣಸು, ಶುಂಠಿ ಹಾಗೂ ಬೆಳ್ಳುಳ್ಳಿ ಹಾಕಿ ಮಿಕ್ಸಿ ಮಾಡಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ನಂತರ ಈರುಳ್ಳಿ ಹಾಕಿ ಬಾಡಿಸಿ
ಇದಕ್ಕೆ ಮಿಕ್ಸಿಯ ಮಸಾಲಾ ಹಾಕಿ
ನಂತರ ಉಪ್ಪು, ಅರಿಶಿಣ ಹಾಕಿ
ನಂತರ ಕೊತ್ತಂಬರಿ ಹಾಕಿ ಆಫ್ ಮಾಡಿ
ಆದಮೇಲೆ ನಿಂಬೆಹುಳಿ ಹಾಕಿ, ಬಿಸಿ ಮಾಡಿದ ಶೇಂಗಾ ಹಾಕಿ ಮಿಕ್ಸ್ ಮಾಡಿದ್ರೆ ಗೊಜ್ಜು ರೆಡಿ
ಇದಕ್ಕೆ ಅನ್ನ ಹಾಕಿ ಮಿಕ್ಸ್ ಮಾಡಿ ಚಟ್ನಿ ಹಾಗೂ ಒಡೆ ಜೊತೆ ಸವಿಯಿರಿ