ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರು ಚನ್ನಪಟ್ಟಣ ಜಿಲ್ಲೆಯ ಜನತೆಗೆ ಕೈ ಜೋಡಿಸಿ ನಿಮ್ಮ ಪಾದಗಳಿಗೆ ಶಿರಸಾವಹಿಸಿ ಬೇಡಿಕೊಳ್ತಿದ್ದೇನೆ ಕನಿಷ್ಠ ಒಂದು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ.
ಉಪಚುನಾವಣೆ ಹಿನ್ನೆಲೆ ಮಾಕಳಿ ಗ್ರಾಮದ ಪ್ರಚಾರದಲ್ಲಿ ನಿಖಿಲ್, ಕುಮಾರಣ್ಣನ ನಾಯಕತ್ವಕ್ಕೆ ಇದು ಅಗ್ನಿ ಪರೀಕ್ಷೆ. ಇಲ್ಲಿ ನಿಖಿಲ್ ಪ್ರಶ್ನೆ ಅಲ್ಲ. ಎಲ್ಲವೂ ನಿಮ್ಮ ಕೈಯಲ್ಲಿದೆ. ಕೈ ಜೋಡಿಸಿ ನಿಮ್ಮ ಪಾದಗಳಿಗೆ ಶಿರಸಾವಹಿಸಿ ಬೇಡಿಕೊಳ್ತಿದ್ದೇನೆ. ಒಂದೇ ಒಂದು ಅವಕಾಶ ಕೊಡಿ. ದೇವೇಗೌಡರು, ಕುಮಾರಣ್ಣ ಅವ್ರು ಕೆಲಸ ಮಾಡಿದ್ದಾರೆ. ನನ್ನ ಕೊನೆ ಉಸಿರಿರೋವರೆಗೂ ನಿಮ್ಮ ಜೊತೆ ಇರ್ತೇನೆ. ಒಂದು ಅವಕಾಶ ಕೊಡಿ ಎಂದು ಜನತೆ ಮುಂದೆ ಮನವಿ ಮಾಡಿಕೊಂಡಿದ್ದಾರೆ.